For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್ 1ರಿಂದ ಈ 5 ಬದಲಾವಣೆಗಳು ನಿಮ್ಮ ಮೇಲೆ ಪರಿಣಾಮ ಬೀರಲಿವೆ

ಇಂದಿನಿಂದ, ಅಂದರೆ ಅಕ್ಟೋಬರ್ 1ರಿಂದ ಐದು ಬದಲಾವಣೆಗಳಾಗಲಿದ್ದು, ಅದು ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಬೀರುತ್ತವೆ. ಐದು ಪ್ರಮುಖ ಬದಲಾವಣೆಗಳು ನಿಮ್ಮ ಹಣಕಾಸು ನಿರ್ಧಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡೋಣ ಬನ್ನಿ..

|

ಇಂದಿನಿಂದ, ಅಂದರೆ ಅಕ್ಟೋಬರ್ 1ರಿಂದ ಐದು ಬದಲಾವಣೆಗಳಾಗಲಿದ್ದು, ಅದು ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಬೀರುತ್ತವೆ. ಐದು ಪ್ರಮುಖ ಬದಲಾವಣೆಗಳು ನಿಮ್ಮ ಹಣಕಾಸು ನಿರ್ಧಾರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ನೋಡೋಣ ಬನ್ನಿ..

ಸಾಲಗಳ ಬಾಹ್ಯ ಮಾನದಂಡ

ಸಾಲಗಳ ಬಾಹ್ಯ ಮಾನದಂಡ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ದೇಶನದಂತೆ, ಅಕ್ಟೋಬರ್ 1 ರಿಂದ ಬ್ಯಾಂಕುಗಳು ವಿತರಿಸುವ ಎಲ್ಲಾ ಬದಲಾಗುವ ದರ ಸಾಲಗಳು ಅಂದರೆ ವೈಯಕ್ತಿಕ, ಗೃಹ, ವಾಹನ ಇತ್ಯಾದಿಗಳನ್ನು ಬಾಹ್ಯ ಮಾನದಂಡಕ್ಕೆ ಜೋಡಿಸಬೇಕಾಗುತ್ತದೆ. ಬಾಹ್ಯ ಮಾನದಂಡವು ಆರ್‌ಬಿಐನ ರೆಪೊ ದರ, 3 ಅಥವಾ 6 ತಿಂಗಳ ಖಜಾನೆ ಬಿಲ್ ರಿಟರ್ನ್ ಅಥವಾ ಫೈನಾನ್ಷಿಯಲ್ ಬೆಂಚ್‌ಮಾರ್ಕ್ಸ್ ಇಂಡಿಯಾ (ಎಫ್‌ಬಿಐಎಲ್) ಪ್ರಕಟಿಸಿದ ಯಾವುದೇ ಮಾರುಕಟ್ಟೆ ಬಡ್ಡಿದರದ ಮಾನದಂಡವಾಗಿರಬಹುದು.
ಆರ್‌ಬಿಐ ನಿರ್ದೇಶನದಂತೆ, ಬ್ಯಾಂಕುಗಳು ಬಾಹ್ಯ ಮಾನದಂಡಕ್ಕೆ ಸಂಬಂಧಿಸಿದ ಬಡ್ಡಿದರಗಳನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಮರುಹೊಂದಿಸಬೇಕು. ಆದ್ದರಿಂದ, ಬಾಹ್ಯ ಮಾನದಂಡದ ದರದಲ್ಲಿನ ಬದಲಾವಣೆಯು ನಿಮ್ಮ ಇಎಂಐ ಮೇಲೆ ಪರಿಣಾಮ ಬೀರುತ್ತದೆ.

ಆದಾಯ ತೆರಿಗೆ ಸೂಚನೆಗಳಿಗಾಗಿ ಡಿಐಎನ್ ಸಂಖ್ಯೆ

ಆದಾಯ ತೆರಿಗೆ ಸೂಚನೆಗಳಿಗಾಗಿ ಡಿಐಎನ್ ಸಂಖ್ಯೆ

ಅಕ್ಟೋಬರ್ 1 ರಿಂದ ಪ್ರಾರಂಭಿಸಿ, ಎಲ್ಲಾ ಆದಾಯ ತೆರಿಗೆ ಪ್ರಕಟಣೆಗಳು, ಪತ್ರಗಳು ಅಥವಾ ಯಾವುದೇ ಅಧಿಕೃತ ತೆರಿಗೆಗೆ ಸಂಬಂಧಿಸಿದ ಪತ್ರವ್ಯವಹಾರವು 'ಡಾಕ್ಯುಮೆಂಟ್ ಗುರುತಿನ ಸಂಖ್ಯೆ' ಅಥವಾ ಡಿಐಎನ್ ಎಂಬ ವಿಶಿಷ್ಟ ಸಂಖ್ಯೆಯನ್ನು ಹೊಂದಿರುತ್ತದೆ. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ತೆರಿಗೆ ಇಲಾಖೆ ಈಗಾಗಲೇ ತನ್ನ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಡಿಐಎನ್ ಪರಿಶೀಲಿಸುವ ಸೌಲಭ್ಯವನ್ನು ಪ್ರಾರಂಭಿಸಿದೆ.

ಇಂಧನ ಪಾವತಿ ಮೇಲೆ ಕ್ರೆಡಿಟ್ ಕಾರ್ಡ್‌ ಮೂಲಕ ರಿಯಾಯಿತಿ ಇಲ್ಲ

ಇಂಧನ ಪಾವತಿ ಮೇಲೆ ಕ್ರೆಡಿಟ್ ಕಾರ್ಡ್‌ ಮೂಲಕ ರಿಯಾಯಿತಿ ಇಲ್ಲ

ಪಿಟಿಐ ವರದಿಯ ಪ್ರಕಾರ, ಅಕ್ಟೋಬರ್ 1 ರಿಂದ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನದ ಮೇಲೆ ಕ್ರೆಡಿಟ್ ಕಾರ್ಡ್ ಪಾವತಿಗಳಿಗೆ ನೀಡಲಾಗುವ ಶೇಕಡಾ 0.75 ರಷ್ಟು ರಿಯಾಯಿತಿಯನ್ನು ಹಿಂಪಡೆಯಲಾಗುವುದು. ಇಂತಹ ರಿಯಾಯಿತಿಗಳನ್ನು ತೈಲ ಕಂಪನಿಗಳು ಎರಡೂವರೆ ವರ್ಷಗಳ ಹಿಂದೆ ಅನಾಣ್ಯೀಕರಣದ ನಂತರ ಪರಿಚಯಿಸಿವೆ. ಆದಾಗ್ಯೂ, ಡೆಬಿಟ್ ಕಾರ್ಡ್‌ಗಳು ಮತ್ತು ಇತರ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಮಾಡಿದ ಪಾವತಿಗಳ ಮೇಲಿನ ರಿಯಾಯಿತಿಗಳು ಮುಂದುವರಿಯುತ್ತವೆ.

ಸರ್ಕಾರಿ ಪಿಂಚಣಿದಾರರಿಗೆ ಸಿಹಿಸುದ್ದಿ

ಸರ್ಕಾರಿ ಪಿಂಚಣಿದಾರರಿಗೆ ಸಿಹಿಸುದ್ದಿ

ಅಕ್ಟೋಬರ್ 1 ರಿಂದ, ಏಳು ವರ್ಷಗಳ ಸೇವೆಯನ್ನು ಪೂರೈಸುವ ಮೊದಲು ನಿಧನರಾದ ಸರ್ಕಾರಿ ನೌಕರರ ಕುಟುಂಬಗಳು ಸಹ ವರ್ಧಿತ ಪಿಂಚಣಿಗೆ ಅರ್ಹರಾಗಿರುತ್ತಾರೆ. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳನ್ನು ಸರ್ಕಾರ ಸೆಪ್ಟೆಂಬರ್ 19, 2019 ರ ಅಧಿಸೂಚನೆಯ ಮೂಲಕ ತಿದ್ದುಪಡಿ ಮಾಡಿದೆ.
ಅಧಿಸೂಚನೆಯ ಪ್ರಕಾರ, ಅಕ್ಟೋಬರ್ 1, 2019 ರ ಮೊದಲು 10 ವರ್ಷಗಳಲ್ಲಿ ಏಳು ವರ್ಷಗಳ ಸೇವೆ ಪೂರ್ಣಗೊಳ್ಳುವ ಮೊದಲು ನಿಧನರಾದವರು ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ವರ್ಧಿತ ದರದಲ್ಲಿ ಕುಟುಂಬ ಪಿಂಚಣಿಗೆ ಅರ್ಹರಾಗಿರುತ್ತಾರೆ.

ಆನ್ಲೈನ್ ಪೋರ್ಟಲ್‌ಗಳ ಮೂಲಕ ಪ್ರಯಾಣ ವಿಮೆಯನ್ನು ಮಾರಾಟ ನಿಯಮ

ಆನ್ಲೈನ್ ಪೋರ್ಟಲ್‌ಗಳ ಮೂಲಕ ಪ್ರಯಾಣ ವಿಮೆಯನ್ನು ಮಾರಾಟ ನಿಯಮ

ಐಆರ್ಡಿಎಐ ಸೆಪ್ಟೆಂಬರ್ 27, 2019 ರ ತನ್ನ ಸುತ್ತೋಲೆಯಲ್ಲಿ, ಆನ್ಲೈನ್ ಪೋರ್ಟಲ್‌ಗಳಲ್ಲಿ ಟಿಕೆಟ್ ಖರೀದಿಸುವ ಸಮಯದಲ್ಲಿ ಪ್ರಯಾಣ ವಿಮೆ ಮೊದಲೇ ಆಯ್ಕೆ ಮಾಡಿದ ಡೀಫಾಲ್ಟ್ ಆಯ್ಕೆಯಾಗಿ ಮಾರಾಟ ಮಾಡುವುದನ್ನು ನಿರ್ಬಂಧಿಸಿದೆ. ನಿಯಮಗಳಿಗೆ ಅನುಸಾರವಾಗಿರದ ಎಲ್ಲಾ ಗುಂಪು ವಿಮಾ ವ್ಯವಸ್ಥೆಗಳನ್ನು 2019 ರ ಅಕ್ಟೋಬರ್ 1 ರಿಂದ ಜಾರಿಗೆ ತರಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

 

 

Read more about: finance news money savings
English summary

5 changes that will impact your finances from October 1

From today, that is October 1, there are five changes that will have a bearing on your personal finances.
Story first published: Tuesday, October 1, 2019, 15:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X