For Quick Alerts
ALLOW NOTIFICATIONS  
For Daily Alerts

ಕೃಷಿ ವಲಯ: ಶೇ. 40 ರಷ್ಟು ಲಾಭಕ್ಕಾಗಿ ಈ ರಸಗೊಬ್ಬರ ಸ್ಟಾಕ್‌ ಖರೀದಿಸಿ

|

ಕೊರೊನಾ ವೈರಸ್‌ ಸಾಂಕ್ರಾಮಿಕವು ಹಲವಾರು ಕ್ಷೇತ್ರಗಳಿಗೆ ಭಾರೀ ಹೊಡೆತವನ್ನು ನೀಡಿದೆ. ಉತ್ಪಾದನೆ, ಜವಳಿ, ಪ್ರವಾಸೋದ್ಯಮ ಇತ್ಯಾದಿಗಳಂತಹ ಇತರ ಪ್ರಮುಖ ಕ್ಷೇತ್ರಗಳು ಕೊರೊನಾ ವೈರಸ್‌ ಸಾಂಕ್ರಾಮಿಕದಿಂದಾಗಿ ತತ್ತರಿಸಿ ಹೋಗಿದೆ. ಆದರೆ ಈ ನಡುವೆ ಕೃಷಿ ಕ್ಷೇತ್ರಯು ಭಾರತೀಯ ಆರ್ಥಿಕತೆಯ ಸಂರಕ್ಷಕವಾಗಿದೆ.

ಡಿಸೆಂಬರ್ 17ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ ಡಿಸೆಂಬರ್ 17ರ ಪೇಟೆ ಧಾರಣೆ: ಅಡಿಕೆ, ಕಾಫಿ, ಮೆಣಸು ಹಾಗೂ ತರಕಾರಿ ಬೆಲೆ ಮಾರುಕಟ್ಟೆ ಬೆಲೆ

ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆಯಿಂದಾಗಿ ಸಂಬಂಧಿತ ಕೈಗಾರಿಕೆಗಳು ಸಹ ಬೆಳವಣಿಗೆ ಹೊಂದಿದೆ. ಕೃಷಿ ಉಪಕರಣಗಳು ಮತ್ತು ರಸಗೊಬ್ಬರ ಕೈಗಾರಿಕೆ ಕೂಡಾ ಬೆಳವಣಿಗೆ ಹೊಂದಿದೆ. ಹೆಸರಾಂತ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್‌ರ ಇತ್ತೀಚಿನ ವರದಿಯಲ್ಲಿ ಪ್ರಕಾರ ಕೊರೊಮ್ಯಾಂಡಲ್ ಇಂಟರ್‌ನ್ಯಾಶನಲ್‌ನ ಷೇರುಗಳು 1 ವರ್ಷದ ಅವಧಿಯಲ್ಲಿ ಶೇಕಡ 40 ರಷ್ಟು ಏರಿಕೆ ಆಗುವ ಸಾಧ್ಯತೆ ಇದ್ದು ಈ ಷೇರುಗಳನ್ನು ಖರೀದಿ ಮಾಡಲು ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್‌ ಹೂಡಿಕೆದಾರರಿಗೆ ಶಿಫಾರಸು ಮಾಡಿದೆ.

ಟಾರ್ಗೆಟ್‌ ಪ್ರೈಸ್‌

ಟಾರ್ಗೆಟ್‌ ಪ್ರೈಸ್‌

ಕೋರಮಂಡಲ್ ಇಂಟರ್ನ್ಯಾಷನಲ್‌ನ (CRIN) ಪ್ರಸ್ತುತ ಮಾರುಕಟ್ಟೆ ಬೆಲೆಯು (CMP) ರೂ. 740 ಆಗಿದೆ. ಬ್ರೋಕರೇಜ್ ಸಂಸ್ಥೆ, ಮೋತಿಲಾಲ್ ಓಸ್ವಾಲ್ ಶಿಫಾರಸ್ಸು ಮಾಡಿದ್ದು, ಸ್ಟಾಕ್‌ನ ಗುರಿ ಬೆಲೆ ರೂ. 1035 ಆಗಿದೆ. ಆದ್ದರಿಂದ ಸ್ಟಾಕ್ 1 ವರ್ಷದ ಟಾರ್ಗೆಟ್ ಅವಧಿಯಲ್ಲಿ ಶೇಕಡ 40 ರಷ್ಟು ಲಾಭವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕಂಪನಿಯ ಕಾರ್ಯಕ್ಷಮತೆ ಹೇಗಿದೆ?

ಕಂಪನಿಯ ಕಾರ್ಯಕ್ಷಮತೆ ಹೇಗಿದೆ?

ಅಕ್ಟೋಬರ್-ನವೆಂಬರ್ 21 ರಲ್ಲಿ ಕೋರಮಂಡಲ್ ಇಂಟರ್ನ್ಯಾಷನಲ್‌ನ ಒಟ್ಟಾರೆ ಮೌಲ್ಯವು ಶೇಕಡ 20 ರಷ್ಟು ಕುಸಿತ ಕಂಡಿದೆ. ಏಕೆಂದರೆ ವ್ಯಾಪಾರ ವಲಯದಲ್ಲಿ ಶೇಕಡ 78 ರಷ್ಟು ಕುಸಿತ ಕಂಡಿತ್ತು. ಆದಾಗ್ಯೂ, ಉತ್ಪಾದನೆಯ ಪ್ರಮಾಣವು ಶೇಕಡ 12 ರಷ್ಟು ಬೆಳವಣಿಗೆ ಕಂಡಿದೆ. ಉತ್ಪಾದನಾ ವಲಯದ ಬೆಳವಣಿಗೆಯು ಹಣಕಾಸು ವರ್ಷ 21 ರಲ್ಲಿ ಅಧಿಕವಾಗಿದೆ. ಹೆಚ್ಚುವರಿಯಾಗಿ, ಅಕ್ಟೋಬರ್-ನವೆಂಬರ್ 21 ರಲ್ಲಿ ಒಟ್ಟು ಫಾಸ್ಫೇಟಿಕ್ ರಸಗೊಬ್ಬರ ಪ್ರಮಾಣಗಳು ಶೇಕಡ 6 ರಷ್ಟು ಬೆಳವಣಿಗೆ ಹೊಂದಿದೆ. ಅಕ್ಟೋಬರ್‌-ನವೆಂಬರ್ 20 ರಲ್ಲಿ ಶೇಡಕ 6 ರಷ್ಟು ಏರಿಕೆ ಕಂಡಿತ್ತು. ಫಾಸ್ಫೇಟಿಕ್ ರಸಗೊಬ್ಬರ ಬೆಳವಣಿಗೆಯು ಶೇಕಡ 40 ರಷ್ಟು ಆಗಿತ್ತು. ಆದಾಗ್ಯೂ, ಕೋರಮಂಡಲ್ ಇಂಟರ್ನ್ಯಾಷನಲ್‌ನ ಒಟ್ಟು ಕಚ್ಚಾ ವಸ್ತುಗಳ ಬೆಲೆಯ ಶೇಕಡ 38-40 ರಷ್ಟಿರುವ ಫಾಸ್ಪರಿಕ್ ಆಮ್ಲದಲ್ಲಿನ ಬೆಲೆ ಏರಿಕೆಯು ತಯಾರಕರಿಗೆ ಸವಾಲಾಗಿದೆ.

ಮೋತಿಲಾಲ್ ಓಸ್ವಾಲ್ ಪ್ರತಿಕ್ರಿಯೆ

ಮೋತಿಲಾಲ್ ಓಸ್ವಾಲ್ ಪ್ರತಿಕ್ರಿಯೆ

ಮೋತಿಲಾಲ್ ಓಸ್ವಾಲ್ ಪ್ರಕಾರ, "ಸರ್ಕಾರಿ ಸಬ್ಸಿಡಿಯಲ್ಲಿ ಹೆಚ್ಚಳದ ಹೊರತಾಗಿಯೂ, ಸರಕು ವೆಚ್ಚದಲ್ಲಿನ ಹೆಚ್ಚಳವನ್ನು ಸಮರ್ಪಕವಾಗಿ ಸರಿದೂಗಿಸಲು ಸರ್ಕಾರದ ನಿರ್ಬಂಧಗಳಿಂದ ಉದ್ಯಮವು ಸಾಕಷ್ಟು ಬೆಲೆ ಏರಿಕೆಗಳನ್ನು ಮಾಡಿಕೊಳ್ಳದ ಕಾರಣ ಕೊಂಚ ಒತ್ತಡ ಉಂಟಾಗುವ ನಿರೀಕ್ಷೆ ಇದೆ. ಬೆಳೆಗಳಲ್ಲಿ ಸಮತೋಲಿತ ಪೋಷಕಾಂಶಗಳನ್ನು ಹೊಂದಿರುವ ಬಗ್ಗೆ ರೈತರಲ್ಲಿ ಜಾಗೃತಿಯನ್ನು ಹೆಚ್ಚಿಸುವ ಬಗ್ಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ. ಇದು ಯೂರಿಯಾದಿಂದ ಸಂಕೀರ್ಣ ರಸಗೊಬ್ಬರಗಳನ್ನು ರೈತರು ಬಳಸಲು ಸಹಾಯ ಮಾಡುತ್ತದೆ. ಅದರಲ್ಲಿ ಕೋರಮಂಡಲ್ ಇಂಟರ್ನ್ಯಾಷನಲ್‌ ಮುಖ ಫಲಾನುಭವಿಯಾಗಿದೆ."

ಕಂಪನಿಯ ಬಗ್ಗೆ

ಕಂಪನಿಯ ಬಗ್ಗೆ

ಕೋರಮಂಡಲ್ ಇಂಟರ್‌ನ್ಯಾಶನಲ್ ಕೃಷಿ-ಪರಿಹಾರ ಪೂರೈಕೆದಾರ ಮತ್ತು ಭಾರತದ ಅತಿದೊಡ್ಡ ಖಾಸಗಿ ವಲಯದ ಫಾಸ್ಫೇಟಿಕ್ ರಸಗೊಬ್ಬರ ಕಂಪನಿಯಾಗಿದೆ. ಕೋರಮಂಡಲ್ ಇಂಟರ್‌ನ್ಯಾಶನಲ್ ವಿಶ್ವದ ಅತಿ ದೊಡ್ಡ ಬೇವು ಆಧಾರಿತ ಜೈವಿಕ-ಕೀಟನಾಶಕ ತಯಾರಕರಾಗಿದ್ದಾರೆ. ಸಾವಯವ ಗೊಬ್ಬರ ತಯಾರಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆಯೇ ಈ ಸಂಸ್ಥೆಯು 750 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿರುವ ದೇಶದ ಅತಿದೊಡ್ಡ ಕೃಷಿ-ಚಿಲ್ಲರೆ ಸರಪಳಿಯನ್ನು ಹೊಂದಿದ್ದೇವೆ

ನಿಮ್ಮ ಗಮನಕ್ಕೆ

ನಿಮ್ಮ ಗಮನಕ್ಕೆ

ಮೇಲಿನ ಸ್ಟಾಕ್ ಬಗ್ಗೆ ಮಾಹಿತಿಯನ್ನು ಮೋತಿಲಾಲ್ ಓಸ್ವಾಲ್ ಅವರ ಬ್ರೋಕರೇಜ್ ವರದಿಯಿಂದ ತೆಗೆದುಕೊಳ್ಳಲಾಗಿದೆ. ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಹಣಕಾಸಿನ ನಷ್ಟದ ಅಪಾಯವನ್ನುಂಟುಮಾಡುತ್ತದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆ ವಹಿಸಬೇಕು. ಲೇಖನದ ಆಧಾರದ ಮೇಲೆ ನಿರ್ಧಾರ ಕೈಗೊಂಡು ಯಾವುದೇ ಪರಿಣಾಮ ಉಂಟಾದರೂ ಉಂಟಾಗುವ ಯಾವುದೇ ನಷ್ಟಗಳಿಗೆ ಗ್ರೇನಿಯಮ್ ಇನ್ಫಾರ್ಮೇಶನ್‌ ಟೆಕ್ನಾಲಜಿ ಆಗಲಿ ಅಥವಾ ಲೇಖಕರು ಜವಾಬ್ದಾರರಾಗಿರುವುದಿಲ್ಲ.

English summary

With Remarkable Growth In Agri-sector, Buy This Fertilizer Stock For 40% Return: Motilal Oswal

With Remarkable Growth In Agri-sector, Buy This Fertilizer Stock For 40% Return: Motilal Oswal.
Story first published: Friday, December 17, 2021, 23:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X