For Quick Alerts
ALLOW NOTIFICATIONS  
For Daily Alerts

2ನೇ ಅವಧಿಗೆ ಆಯ್ಕೆಯಾಗಿರುವ ನರೇಂದ್ರ ಮೋದಿಯವರ ಮುಂದಿರುವ ಸವಾಲುಗಳೇನು?

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದು, ಸರ್ಕಾರದ ಮುಂದಿರುವ ಸವಾಲುಗಳಾದ ದೇಶದ ಆರ್ಥಿಕತೆಯ ಪುನಶ್ಚೇತನ, ಉದ್ಯೋಗ ಸೃಷ್ಟಿಯಂತಹ ಪ್ರಮುಖ ವಿಷಯಗಳ ಕುರಿತು ತಜ್ಞರು ಹಾಗು ಸಂಸ್ಥೆಗಳು ವಿಶ್ಲೇಷಣೆ.

|

ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿದ್ದು, ಸರ್ಕಾರದ ಮುಂದಿರುವ ಸವಾಲುಗಳಾದ ದೇಶದ ಆರ್ಥಿಕತೆಯ ಪುನಶ್ಚೇತನ, ಉದ್ಯೋಗ ಸೃಷ್ಟಿಯಂತಹ ಪ್ರಮುಖ ವಿಷಯಗಳ ಕುರಿತು ತಜ್ಞರು ಹಾಗು ಸಂಸ್ಥೆಗಳು ವಿಶ್ಲೇಷಣೆ ಮಾಡಿದ್ದಾರೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಅದರ ಮುಂದಿರುವ ಸವಾಲು ಮತ್ತು ನಿರೀಕ್ಷೆಗಳ ಬಗ್ಗೆ ಚರ್ಚೆ, ವಿಶ್ಲೇಷಣೆ ಸಾಮಾನ್ಯ.

ಭಾರತದ ಆರ್ಥಿಕ ಕುಸಿತವು ತೀವ್ರ ಗಂಭೀರವಾಗಿದೆ ಮತ್ತು ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ತುರ್ತಾಗಿ ತೆರಿಗೆ ಮತ್ತು ಬಡ್ಡಿದರಗಳನ್ನು ಕಡಿತಗೊಳಿಸಬೇಕಾಗಿದೆ ಎಂದು ಉನ್ನತ ಕೈಗಾರಿಕಾ ಸಂಸ್ಥೆ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅವಧಿಯ ಅದಿಕಾರ ವಹಿಸಿಕೊಳ್ಳುವ ಮುನ್ನವೇ ಸೋಮವಾರ ಕೈಗಾರಿಕಾ ಸಂಸ್ಥೆ ತಿಳಿಸಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇ. 6.6 ಏರಿಕೆಯಾಗಿದೆ. ಇದು ಐದು ತ್ರೈಮಾಸಿಕಗಳಲ್ಲಿ ನಿಧಾನವಾದ ವೇಗವಾಗಿದೆ.

ದೇಶೀ ಅನುಬೋಗ ಕುಸಿತ

ದೇಶೀ ಅನುಬೋಗ ಕುಸಿತ

ದುರ್ಬಲಗೊಳ್ಳುತ್ತಿರುವ ಜಾಗತಿಕ ಆರ್ಥಿಕ ವಾತಾವರಣವನ್ನು ಸರಿದೂಗಿಸಲು ದೇಶೀಯ ಅನುಬೋಗವು ವೇಗವಾಗಿ ಬೆಳೆಯುತ್ತಿಲ್ಲ ಎಂಬುದು ದೊಡ್ಡ ಚಿಂತೆ ಎಂದು ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ (FICCI) ಒಕ್ಕೂಟವು ಅಭಿಪ್ರಾಯಿಸಿದೆ. ಇತ್ತೀಚಿನ ಆರ್ಥಿಕ ಕುಸಿತಕ್ಕೆ ಹೂಡಿಕೆ ಮತ್ತು ನಿಧಾನಗತಿಯ ರಪ್ತುಗಳ ಬೆಳವಣಿಗೆ ಮಾತ್ರವಲ್ಲದೆ ಅನುಬೋಗಿಗಳ ಬೇಡಿಕೆಯಲ್ಲಿನ ಕುಸಿತವೂ ಕೂಡ ಕಾರಣವಾಗಿದೆ ಎಂದಿದೆ.

ಆರ್ಥಿಕ ಕುಸಿತ, ಉದ್ಯೋಗ ಸೃಷ್ಟಿ ಸವಾಲು

ಆರ್ಥಿಕ ಕುಸಿತ, ಉದ್ಯೋಗ ಸೃಷ್ಟಿ ಸವಾಲು

ಕೃಷಿ ಕ್ಷೇತ್ರದ ಆರ್ಥಿಕ ಸಮಸ್ಯೆಗಳು, ಉದ್ಯೋಗ ಸೃಷ್ಟಿ ವೈಫಲ್ಯತೆ, ಆರ್ಥಿಕತೆಯ ಕುಸಿತದ ಹೊರತಾಗಿಯೂ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಬಹುಮತವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ದೇಶ ಎದುರಿಸುತ್ತಿರುವ ಸವಾಲುಗಳ ಪರಿಹಾರಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾದ ತುರ್ತು ಅಗತ್ಯವಿದೆ.
ಭಾರತೀಯ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ (FICCI) ಒಕ್ಕೂಟ ನೀಡಿರುವ ಸಲಹೆಯನ್ನು ಮುಂದಿನ ಬಜೆಟ್ ನಲ್ಲಿ ಸರ್ಕಾರ ಅಳವಡಿಸಬಹುದಾಗಿದೆ.

ಕುಸಿತದ ಪರಿಣಾಮ

ಕುಸಿತದ ಪರಿಣಾಮ

ಕೆಲವು ಸಮಸ್ಯೆಗಳು ಕೈಗಾರಿಕಾ ಉತ್ಪಾದನೆ ಮತ್ತು ಉತ್ಪಾದನಾ ಬೆಳವಣಿಗೆ ಕುಸಿತ, ಕಾರು ಮತ್ತು ದ್ವಿಚಕ್ರ ವಾಹನ ಮಾರಾಟ ಕುಸಿತ ಮತ್ತು ವಿಮಾನಯಾನ ಪ್ರಯಾಣಿಕರ ಕುಸಿತಕ್ಕೆ ಕಾರಣವಾಗಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಆರ್ಥಿಕ ಸಮಸ್ಯೆ, ಉದ್ಯೋಗ ಸೃಷ್ಟಿ, ಕೈಗಾರಿಕಾ ಉತ್ಪಾದನೆ ತುಂಬಾ ಗಂಭೀರವಾದ ವಿಷಯವಾಗಿದ್ದು, ತಕ್ಷಣದಲ್ಲೇ ಸರಿಯಾದ ಕ್ರಮ ಕೈಗೊಳ್ಳದಿದ್ದರೆ ದೀರ್ಘಾಕಾಲದವರೆಗೆ ಪರಿಣಾಮ ಬೀರುತ್ತದೆ.

ರೈತರಿಗೆ 6,000 ಪ್ರೋತ್ಸಾಹಧನ

ರೈತರಿಗೆ 6,000 ಪ್ರೋತ್ಸಾಹಧನ

ಹೊಸ ಸರಕಾರವು ಕಾರ್ಪೋರೇಟ್ ಮತ್ತು ವೈಯಕ್ತಿಕ ತೆರಿಗೆಗಳನ್ನು ಕಡಿತಗೊಳಿಸಿ, ಬಡ ರೈತರಿಗೆ ವರ್ಷಕ್ಕೆ ರೂ. 6,000 ಪ್ರೋತ್ಸಾಹಧನ ಹಸ್ತಾಂತರಿಸುವ ಕಾರ್ಯಕ್ರಮವನ್ನು ವಿಸ್ತರಿಸಬೇಕು. ಅನುಬೋಗಿ ಬೇಡಿಕೆಯನ್ನು ಹೆಚ್ಚಿಸಲು ಮತ್ತು ರಫ್ತು ಆಧಾರಿತ ಉತ್ಪಾದಕರಿಗೆ ತೆರಿಗೆ ವಿನಾಯಿತಿಗಳನ್ನು ಪರಿಗಣಿಸಬೇಕು ಫಿಕ್ಕಿ ಹೇಳಿದೆ.

ತೆರಿಗೆ ಕಡಿತ, ರಫ್ತುದಾರರಿಗೆ ಹೆಚ್ಚಿನ ಪ್ರೋತ್ಸಾಹ

ತೆರಿಗೆ ಕಡಿತ, ರಫ್ತುದಾರರಿಗೆ ಹೆಚ್ಚಿನ ಪ್ರೋತ್ಸಾಹ

ಆದಾಯ ತೆರಿಗೆಯನ್ನು ಕಡಿಮೆ ಮಾಡಲು ಮತ್ತು ಎಲ್ಲಾ ಕ್ಷೇತ್ರಗಳಿಗೆ ಹೂಡಿಕೆ ಭತ್ಯೆಯ ವ್ಯಾಪ್ತಿಯನ್ನು ವಿಸ್ತರಿಸಲು ಇದು ಮಹತ್ವದ್ದಾಗಿತ್ತು, ಆದರೆ ರಫ್ತುದಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಭಾರತೀಯ ಉದ್ಯಮ ಒಕ್ಕೂಟ ಸಂಸ್ಥೆ ಹೇಳಿದೆ.

ಬಡ್ಡಿದರ ಕಡಿತ

ಬಡ್ಡಿದರ ಕಡಿತ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬಡ್ಡಿದರವನ್ನು ಕಡಿತಗೊಳಿಸಬೇಕೆಂದು ಭಾರತೀಯ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ (FICCI) ಕರೆ ನೀಡಿದೆ. ಇತ್ತೀಚಿಗೆ ರೆಪೋ ದರ ಕಡಿತವಾದರೂ ವಾಸ್ತವದಲ್ಲಿ ದೀರ್ಘಾವಧಿಗೆ ಬಡ್ಡಿದರ ಹೆಚ್ಚಾಗಿಯೆ ಉಳಿದಿದೆ. ವಾಣಿಜ್ಯ ಬ್ಯಾಂಕುಗಳಿಗೆ ರೆಪೋ ದರ ಕಡಿತದ ಪ್ರಯೋಜನ ಗ್ರಾಹಕರಿಗೆ ವರ್ಗಾಯಿಸುವ ಇಷ್ಟವಿರಲಿಲ್ಲ. ಆದ್ದರಿಂದ ದೀರ್ಘಾವಧಿಯ ಬಡ್ಡಿ ದರಗಳು ಹೆಚ್ಚಿನ ಮಟ್ಟದಲ್ಲಿಯೇ ಉಳಿದಿವೆ.

ತೈಲ ಬೆಲೆ ಏರಿಕೆ

ತೈಲ ಬೆಲೆ ಏರಿಕೆ

2014 ರಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸಿದಾಗ, ಜಾಗತಿಕ ತೈಲ ಬೆಲೆ ಕುಸಿದಿದೆ. ಆದರೆ ಅವರು ಎರಡನೆಯ ಅವಧಿಯ ಸಂದರ್ಭದಲ್ಲೂ ಏರುತ್ತಿರುವ ತೈಲ ಬೆಲೆಗಳು ಹಣಕಾಸು ಕೊರತೆಯನ್ನು ಹೆಚ್ಚಿಸಲಿವೆ. ಇರಾನ್ ನಿಂದ ತೈಲ ಅಮದು ನಿಷೇಧ ಮಾಡಿರುವ ಅಮೆರಿಕಾದ ಹೊಸ ನಿಯಮ ಭಾರೀ ಪರಿಣಾಮವನ್ನೇ ಬಿರುತ್ತಿದೆ.

English summary

What are the challenges before Narendra Modi, who has been elected for the 2nd term?

India's slowing economic growth is of serious concern and the country needs to urgently cut tax and interest rates to revive the economy.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X