For Quick Alerts
ALLOW NOTIFICATIONS  
For Daily Alerts

ಆರ್ಬಿಐ ರೆಪೋ ದರ ಇಳಿಕೆ ಮಾಡಿದರೆ ಗ್ರಾಹಕರಿಗೆ ಏನು ಲಾಭ?

ಮೋದಿ ಸರ್ಕಾರ 2.0 ಎರಡನೇ ಅವಧಿ ಆರಂಭವಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ದ್ವೈಮಾಸಿಕ ಹಣಕಾಸು ನೀತಿ ಸಭೆಯ ಫಲಿತಾಂಶಗಳು ಹೊರ ಬಿದ್ದಿವೆ.

|

ಮೋದಿ ಸರ್ಕಾರ 2.0 ಎರಡನೇ ಅವಧಿ ಆರಂಭವಾಗಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ದ್ವೈಮಾಸಿಕ ಹಣಕಾಸು ನೀತಿ ಸಭೆಯ ಫಲಿತಾಂಶಗಳು ಹೊರ ಬಿದ್ದಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ), ಗುರುವಾರ ರೆಪೋ ದರವನ್ನು ಶೇಕಡಾ 0.25ನಷ್ಟು ಇಳಿಕೆ ಮಾಡಿದ್ದು, ಈಗ ಶೇ. 5.75ರಷ್ಟಾಗಿದೆ.
ಆರ್ಬಿಐ ರೆಪೋ ದರ ಇಳಿಕೆ ಮಾಡಿರುವುದು ನಿಜ. ಆದರೆ ಆರ್ಬಿಐ ಬ್ಯಾಂಕುಗಳಿಗೆ ನೀಡಿರುವ ಈ ಲಾಭವನ್ನು ಬ್ಯಾಂಕುಗಳು ಗ್ರಾಹಕರಿಗೆ ವರ್ಗಾಯಿಸುವುದು ಬ್ಯಾಂಕುಗಳಿಗೆ ಬಿಟ್ಟ ವಿಚಾರ.
ರೆಪೋ ದರ ಇಳಿಕೆಯಾಗುದ್ದಂತೆ ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿದರೆ ಗ್ರಾಹಕರಿಗೆ ಲಾಭವಾಗಲಿದ್ದು, ಪ್ರತಿ ತಿಂಗಳು ಇಎಂಐ ಕಟ್ಟುವವರಿಗೆ ಸ್ವಲ್ಪ ಹಣ ಉಳಿಯಲಿದೆ.

ಆರ್ಬಿಐ ರೆಪೋ ದರ ಇಳಿಕೆ ಮಾಡಿದರೆ ಗ್ರಾಹಕರಿಗೆ ಏನು ಲಾಭ?

ರೆಪೊ ದರ ಎಫೆಕ್ಟ್
ಉದಾಹರಣೆಗೆ ನೀವು ರೂ. 30 ಲಕ್ಷ ಗೃಹ ಸಾಲ ಪಡೆದಿದ್ದರೆ ನಿಮಗೆ ಪ್ರತಿ ತಿಂಗಳುರೂ. 474 ಉಳಿತಾಯ ಆಗಲಿದೆ. 20 ವರ್ಷ ಅವಧಿಯ 30 ಲಕ್ಷ ಗೃಹ ಸಾಲ ಸದ್ಯ ಇರುವ ಶೇ. 8.60 ರ ಬಡ್ಡಿ ದರಕ್ಕೆ ರೂ. 26,225 ಪ್ರತಿ ತಿಂಗಳು ಇಎಂಐ ಕಟ್ಟುತ್ತಿದ್ದೀರಿ ಎಂದಿಟ್ಟುಕೊಳ್ಳಿ.
ಆರ್ಬಿಐ ನಂತರ ಬ್ಯಾಂಕುಗಳ ಕೂಡ ಬಡ್ಡಿದರ ಶೇ. 0.25 ನಷ್ಟು ಇಳಿಕೆ ಮಾಡಿದರೆ ಆಗ ಬಡ್ಡಿ ದರ ಶೇ. 8.35 ಕ್ಕೆ ಇಳಿಯುತ್ತದೆ. ಅಂದರೆ ಪ್ರತಿ ತಿಂಗಳು ರೂ. 25,751 ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ ಪ್ರತಿ ತಿಂಗಳು ನಿಮಗೆ ರೂ. 474 ಉಳಿತಾಯವಾಗುತ್ತದೆ.
ರೂ. 20 ಲಕ್ಷ ಸಾಲ ಪಡೆಯುವ ಗ್ರಾಹಕರಿಗೆ ಪ್ರತಿ ತಿಂಗಳಿಗೆ ರೂ. 316 ಉಳಿತಾಯವಾಗಲಿದೆ. ಬ್ಯಾಂಕುಗಳು ಬಡ್ಡಿದರ ಇಳಿಕೆ ಮಾಡಿದರೆ ಮಾತ್ರ ಈ ಲಾಭ ಗ್ರಾಹಕರಿಗೆ ಸಿಗಲಿದೆ.

ಬ್ಯಾಂಕುಗಳು ಬಡ್ಡಿ ದರ ಕಡಿತಗೊಳಿಸಲು ಹಿಂದೇಟು?
ಬ್ಯಾಂಕುಗಳು ಗ್ರಾಹಕರಿಗೆ ಸಾಲದ ಬಡ್ಡಿ ದರ ಕಡಿತಗೊಳಿಸಲು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ. ಠೇವಣಿ ದರಗಳನ್ನು ಇಳಿಸದೆ ಸಾಲದ ಬಡ್ಡಿ ದರಗಳನ್ನು ಕಡಿತಗೊಳಿಸಲು ಸಾಧ್ಯವಿಲ್ಲ ಎನ್ನುವುದು ಬ್ಯಾಂಕುಗಳ ವಾದವಾಗಿದೆ. ಆದರೆ ಆರ್ಬಿಐ ರೆಪೊ ದರ ಇಳಿಸಿದ ಮೇಲೂ ಕೂಡ ಬ್ಯಾಂಕುಗಳು ಠೇವಣಿ ದರಗಳನ್ನು ಕಡಿತಗೊಳಿಸಿಲ್ಲ. ಜತೆಗೆ ನಿರೀಕ್ಷಿತ ಮಟ್ಟದಲ್ಲಿ ಸಾಲದ ಬಡ್ಡಿ ದರವನ್ನೂ ಕಡಿಮೆಗೊಳಿಸಿಲ್ಲ. ಅಲ್ಲದೇ ಎಂಸಿಎಲ್‌ಆರ್‌ ದರ ಕಳೆದ ಜನವರಿ-ಏಪ್ರಿಲ್‌ ಅವಧಿಯಲ್ಲಿ ಶೇ. 10.38 ರಿಂದ ಶೇ. 10.42ಕ್ಕೆ ಏರಿಕೆಯಾಗಿರುವುದನ್ನು ಗಮನಿಸಬಹುದು.

English summary

Modi govt 2.0 RBI repo rate cut, removes NEFT, RTGS payment charges

RBI has removed charges for payments via NEFT and RTGS and asked banks to pass on the benefits to customers.
Story first published: Friday, June 7, 2019, 16:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X