For Quick Alerts
ALLOW NOTIFICATIONS  
For Daily Alerts

ಎಚ್ಚರ: 2021-22 ರ ಹಣಕಾಸು ವರ್ಷದ ಮೊದಲಾರ್ಧದಲ್ಲೇ 4,071 ಬ್ಯಾಂಕಿಂಗ್‌ ವಂಚನೆ!

|

ಈ ವರ್ಷದ ಮೊದಲಾರ್ಧ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್‌ ವಂಚನೆಗಳ ಪ್ರಕರಣವು ಮತ್ತಷ್ಟು ಅಧಿಕವಾಗಿದೆ ಎಂದು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಮಾಹಿತಿ ನೀಡಿದೆ. 2020-21 ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅಂದರೆ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಆರು ತಿಂಗಳ ಅವಧಿಯಲ್ಲಿ ಒಟ್ಟು 3,499 ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ವರದಿ ಆಗಿದ್ದವು. ಆದರೆ 2021-22 ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಅಂದರೆ ಎಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಆರು ತಿಂಗಳ ಅವಧಿಯಲ್ಲಿ ಒಟ್ಟು 4,071 ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ವರದಿ ಆಗಿದೆ ಎಂದು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಮಾಹಿತಿ ನೀಡಿದೆ.

ಆದರೆ ಈ ವರ್ಷ ಬ್ಯಾಂಕಿಂಗ್‌ ವಂಚನೆಗೆ ಒಳಗಾದ ಹಣದ ಮೌಲ್ಯವು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಕಡಿಮೆ ಆಗಿದೆ. ಕಳೆದ ಹಣಕಾಸು ವರ್ಷದ (2020-21) ಮೊದಲಾರ್ಧದಲ್ಲಿ ನಡೆದ ಒಟ್ಟು 3,499 ಬ್ಯಾಂಕಿಂಗ್‌ ವಂಚನೆ ಪ್ರಕರಣಗಳಲ್ಲಿ ಸುಮಾರು 64,261 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕಿಂಗ್‌ ವಂಚನೆ ನಡೆದಿತ್ತು. ಆದರೆ ಈ ಹಣಕಾಸು ವರ್ಷದಲ್ಲಿ (2021-22) 36,342 ಕೋಟಿ ರೂಪಾಯಿ ಮೌಲ್ಯದ ಬ್ಯಾಂಕಿಂಗ್‌ ವಂಚನೆ ಪ್ರಕರಣ ವರದಿ ಆಗಿದೆ ಎಂದು ಆರ್‌ಬಿಐ ಹೇಳಿದೆ.

ಎಚ್ಚರ: ಬ್ಯಾಂಕ್‌ ಖಾತೆಯಿಂದ ಹಣ ಎಗರಿಸಲು ವಂಚಕರ ಹೊಸ ಮಾರ್ಗಎಚ್ಚರ: ಬ್ಯಾಂಕ್‌ ಖಾತೆಯಿಂದ ಹಣ ಎಗರಿಸಲು ವಂಚಕರ ಹೊಸ ಮಾರ್ಗ

ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಬಿಐ, "2020-21 ರ ಹಣಕಾಸು ವರ್ಷದಲ್ಲಿ ಹೆಚ್ಚು ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ವರದಿ ಆಗಿದೆ. ಕ್ರೆಡಿಟ್‌, ಡೆಬಿಟ್‌ ಕಾರ್ಡ್ ಹಾಗೂ ಇಂಟರ್‌ನೆಟ್‌ ವಹಿವಾಟಿನ ಮೂಲಕ ನಡೆದ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ಒಟ್ಟು ಬ್ಯಾಂಕಿಂಗ್‌ ವಂಚನೆ ಪ್ರಕರಣಗಳ ಪೈಕಿ ಶೇಕಡ 34.6 ರಷ್ಟು ಇದೆ," ಎಂದು ತಿಳಿಸಿದೆ.

ಹಣಕಾಸು ವರ್ಷದ ಮೊದಲಾರ್ಧದಲ್ಲೇ 4,071 ಬ್ಯಾಂಕಿಂಗ್‌ ವಂಚನೆ!

ಖಾಸಗಿ ವಲಯದ ಬ್ಯಾಂಕ್‌ ವಂಚನೆ ಪ್ರಕರಣಗಳೇ ಹೆಚ್ಚು!

2020-21 ರ ಹಣಕಾಸು ವರ್ಷದಲ್ಲಿ ಖಾಸಗಿ ವಲಯದ ಬ್ಯಾಂಕ್‌ನಲ್ಲಿ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ಅಧಿಕವಾಗಿದ್ದವು. ಪ್ರಕರಣಗಳ ಸಂಖ್ಯೆಯಲ್ಲೂ ಹಾಗೂ ಹಣದ ಮೌಲ್ಯದ ವಿಚಾರದಲ್ಲಿಯೂ ಖಾಸಗಿ ವಲಯದ ಬ್ಯಾಂಕ್‌ಗಳಲ್ಲೇ ವಂಚನೆ ಅಧಿಕವಾಗಿ ನಡೆದಿತ್ತು. ಇನ್ನು 2021-22 ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಶೇಕಡ 50 ಕ್ಕಿಂತ ಅಧಿಕ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು ಖಾಸಗೀ ವಲಯದ ಬ್ಯಾಂಕ್‌ಗೆ ಸಂಬಂಧಿಸಿದ್ದು ಆಗಿದೆ. ಇದು ಪ್ರಕರಣಗಳಿಗೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ ಹೇಳಿದೆ. ಇನ್ನು ನಾವು ವಂಚನೆಗೆ ಒಳಗಾದ ಮೌಲ್ಯದ ವಿಚಾರದಲ್ಲಿ ಹೇಳುವುದಾದರೆ, ಖಾಸಗೀ ವಲಯದ ಬ್ಯಾಂಕ್‌ಗೆ ಸಂಬಂಧಿಸಿದ ಅಧಿಕ ಹಣ ವಂಚನೆ ನಡೆದಿದೆ. ಇನ್ನು ಈ ಪೈಕಿ ಅಧಿಕವಾಗಿ ಸಾಲಕ್ಕೆ ಸಂಬಂಧಿಸಿದ ಪ್ರಕರಣಗಳು ಆಗಿದೆ. ಇನ್ನು ಈ ಪೈಕಿ ಅಧಿಕ ಪ್ರಕರಣಗಳು ಕಾರ್ಡ್, ಇಂಟರ್‌ನೆಟ್‌ ಹಾಗೂ ನಗದು ವಿಚಾರದಲ್ಲಿ ನಡೆದಿದೆ.

ತಪ್ಪಾದ ಅಥವಾ ವಂಚನೆಯ ಬ್ಯಾಂಕ್ ವಹಿವಾಟಿನಿಂದ ದುಡ್ಡು ಹಿಂಪಡೆಯುವುದು ಹೇಗೆ?ತಪ್ಪಾದ ಅಥವಾ ವಂಚನೆಯ ಬ್ಯಾಂಕ್ ವಹಿವಾಟಿನಿಂದ ದುಡ್ಡು ಹಿಂಪಡೆಯುವುದು ಹೇಗೆ?

ಜನರ ಬ್ಯಾಂಕ್‌ ಖಾತೆಯಿಂದ ಹಣವನ್ನು ಎಗರಿಸಲು ವಂಚಕರು ಈಗ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ತಮ್ಮ ಇಂಜಿನಿಯರಿಂಗ್‌ ತಂತ್ರಗಳನ್ನು ಬಳಸಿಕೊಳ್ಳುತ್ತಿರುವ ವಂಚಕರು ಈ ಮೂಲಕ ಜನರ ಬ್ಯಾಂಕಿಂಗ್‌ ಅಥವಾ ವೈಯಕ್ತಿಕ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಬಳಿಕ ಜನರಿಗೆ ಬ್ಲ್ಯಾಕ್‌ ಮೇಲ್‌ ಮಾಡಿ ಹಣ ಎಗರಿಸುತ್ತಿದ್ದಾರೆ ಎಂದು ಇತ್ತೀಚೆಗೆ ವರದಿ ಆಗಿದೆ. ಈ ವಂಚಕರು ತಮ್ಮ ಟಾರ್ಗೆಟ್‌ಗಳು ಯಾರು ಇರುತ್ತಾರೋ ಅವರಿಂದ ವಿವಿಧ ರೀತಿಯಲ್ಲಿ ಹಣವನ್ನು ಪಡೆಯುತ್ತಾರೆ. ನಾವು ಗಿಫ್ಟ್‌ ನೀಡುತ್ತೇವೆ ಎಂದು ಹೇಳಿಕೊಂಡು, ಸಹಾಯದ ಭರವಸೆ ನೀಡಿಕೊಂಡು ಹಾಗೂ ಕೆಲವೊಮ್ಮೆ ಬೆದರಿಕೆಯನ್ನು ಹಾಕುವ ಮೂಲಕ ಈ ವಂಚಕರು ಹಣವನ್ನು ಪಡೆಯುತ್ತಿದ್ದಾರೆ.

English summary

Banking frauds: 4,071 cases involving ₹36,342 cr reported in H1 FY22 Says RBI

Banking frauds: 4,071 cases involving ₹36,342 cr reported in H1 FY22 Says RBI.
Story first published: Wednesday, December 29, 2021, 12:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X