For Quick Alerts
ALLOW NOTIFICATIONS  
For Daily Alerts

ಡಾಬರ್ ಇಂಡಿಯಾ 4ನೇ ತ್ರೈಮಾಸಿಕ ಲಾಭ ಶೇ. 34.4ರಷ್ಟು ಏರಿಕೆ

|

ಡಾಬರ್ ಇಂಡಿಯಾ ಲಿಮಿಟೆಡ್‌ ನಿವ್ವಳ ಲಾಭವು ಶೇಕಡಾ 34.4ರಷ್ಟು ಏರಿಕೆಯಾಗಿದ್ದು, 378 ಕೋಟಿ ರೂಪಾಯಿಗೆ ತಲುಪಿದೆ. ಶುಕ್ರವಾರ ಕಂಪನಿಯು ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ತ್ರೈಮಾಸಿಕ ಲಾಭವು ಏರಿಕೆಗೊಂಡಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 281 ಕೋಟಿ ರೂ. ದಾಖಲಿಸಿತ್ತು.

2020-21ರ ಏಕೀಕೃತ ಆದಾಯವು 2,337 ಕೋಟಿ ರೂ.ಗಳಾಗಿದ್ದು, ಒಂದು ವರ್ಷದ ಹಿಂದಿನ 1,865 ಕೋಟಿ ರೂ.ಗಳಿಂದ ಶೇಕಡಾ 25ರಷ್ಟು ಏರಿಕೆ ದಾಖಲಿಸಿದೆ.

ಡಾಬರ್ ಇಂಡಿಯಾ 4ನೇ ತ್ರೈಮಾಸಿಕ ಲಾಭ ಶೇ. 34.4ರಷ್ಟು ಏರಿಕೆ

ಹಣಕಾಸು ವರ್ಷದಲ್ಲಿ, ಡಾಬರ್ ಇಂಡಿಯಾ ಏಕೀಕೃತ ಆದಾಯದಲ್ಲಿ ಶೇ10 ರಷ್ಟು ಬೆಳವಣಿಗೆಯನ್ನು ಕಂಡು 9,562 ಕೋಟಿ ರೂ.ಗೆ ದಾಖಲಿಸಿದರೆ, ಏಕೀಕೃತ ನಿವ್ವಳ ಲಾಭವು ಶೇಕಡಾ 17.2 ರಷ್ಟು ಏರಿಕೆಯಾಗಿ 1,693 ಕೋಟಿ ರೂ. ನಷ್ಟಿದೆ. ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 18.9ರಷ್ಟು ಏರಿಕೆಗೊಂಡು EBITDA 442.5 ಕೋಟಿ ರೂ. ತಲುಪಿದೆ.

ಇನ್ನು ದಾಬರ್ ಆಡಳಿತ ಮಂಡಳಿಯು ಪ್ರತಿ ಷೇರಿಗೆ 3 ರೂ.ಗಳ ಲಾಭಾಂಶವನ್ನು(ಡಿವಿಂಡೆಡ್) ಪ್ರಸ್ತಾಪಿಸಿದ್ದು, ಒಟ್ಟು 530.23 ಕೋಟಿ ರೂ.ಗಳಷ್ಟಿದೆ ಎಂದು ಡಾಬರ್ ಅಧ್ಯಕ್ಷ ಅಮಿತ್ ಬರ್ಮನ್ ಹೇಳಿದ್ದಾರೆ.

ಡಾಬರ್‌ನ ಎಫ್‌ಎಂಸಿಜಿ ವ್ಯವಹಾರವು 28.3 ಪ್ರತಿಶತದಷ್ಟು ಏರಿಕೆಯಾಗಿದೆ. ಆಹಾರ ಮತ್ತು ಪಾನೀಯಗಳ ವ್ಯವಹಾರವು ತ್ರೈಮಾಸಿಕದಲ್ಲಿ ಸುಮಾರು 28 ಪ್ರತಿಶತದಷ್ಟು ಬೆಳವಣಿಗೆಯನ್ನು ವರದಿ ಮಾಡಿದೆ.

English summary

Dabur India Q4 Profit Up 34.4 Percent To Rs 378 Crore

Dabur India Ltd on Friday recorded a 34.4 per cent rise in net profit at Rs 378 crore in the Jan-March quarter of FY21
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X