For Quick Alerts
ALLOW NOTIFICATIONS  
For Daily Alerts

ಭಾರತೀಯ ರೈಲ್ವೆಯ 1.40 ಲಕ್ಷ ಹುದ್ದೆ ಭರ್ತಿಗೆ ಡಿ. 15ರಿಂದ ಪರೀಕ್ಷೆ

|

ಭಾರತೀಯ ರೈಲ್ವೆಯಿಂದ 1.40 ಲಕ್ಷ ಹುದ್ದೆ ಭರ್ತಿ ಮಾಡಿಕೊಳ್ಳುವುದಕ್ಕೆ ಈ ವರ್ಷದ ಡಿಸೆಂಬರ್ 15ನೇ ತಾರೀಕಿನಿಂದ ಪರೀಕ್ಷೆ ನಡೆಸಲು ಆರಂಭಿಸುತ್ತದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. "ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 1.4 ಲಕ್ಷ ಹುದ್ದೆಗಳಿಗೆ ಭರ್ತಿ ಮಾಡಲು ನಾವು ಅರ್ಜಿ ಆಹ್ವಾನಿಸಿದ್ದೆವು. ಅವು ಕೊರೊನಾ ಬಿಕ್ಕಟ್ಟು ಆರಂಭವಾಗುವ ಮುಂಚೆಯೇ ಕರೆದಿದ್ದ ಅರ್ಜಿಗಳು" ಎಂದು ರೈಲ್ವೇಸ್ ಸಿಇಒ ವಿ.ಕೆ. ಯಾದವ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಭಾರತೀಯ ರೈಲ್ವೆಗೆ 1490 ಕೋಟಿ ರುಪಾಯಿ ಆದಾಯ ನಷ್ಟಭಾರತೀಯ ರೈಲ್ವೆಗೆ 1490 ಕೋಟಿ ರುಪಾಯಿ ಆದಾಯ ನಷ್ಟ

ಖಾಲಿ ಇರುವ 1.4 ಲಕ್ಷ ಹುದ್ದೆಗಳ ಭರ್ತಿಗೆ 2.42 ಕೋಟಿ ಅರ್ಜಿಗಳು ಬಂದಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. "ಅರ್ಜಿಗಳನ್ನು ಮುಂದಿನ ಹಂತಕ್ಕಾಗಿ ಈಗಾಗಲೇ ಅಂತಿಮಗೊಳಿಸಲಾಗಿದೆ. ಆದರೆ ಕೊರೊನಾ ಬಿಕ್ಕಟ್ಟು ಇರುವ ಕಾರಣಕ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಸಾಧ್ಯವಾಗಿರಲಿಲ್ಲ" ಎಂದು ಯಾದವ್ ಹೇಳಿದ್ದಾರೆ.

ಭಾರತೀಯ ರೈಲ್ವೆಯ 1.40 ಲಕ್ಷ ಹುದ್ದೆ ಭರ್ತಿಗೆ ಡಿ. 15ರಿಂದ ಪರೀಕ್ಷೆ

ಎಲ್ಲ ಮೂರು ವಿಭಾಗದ ಹುದ್ದೆಗಳಿಗಾಗಿ ಡಿಸೆಂಬರ್ 15ರಿಂದ ಪರೀಕ್ಷೆ ನಡೆಸಲು ರೈಲ್ವೇಸ್ ನಿರ್ಧಾರ ಮಾಡಿದೆ. ಸಂಪೂರ್ಣವಾದ ವೇಳಾಪಟ್ಟಿಯನ್ನು ಸದ್ಯದಲ್ಲಿ ಪ್ರಕಟಿಸಲಾಗುವುದು ಎಂದು ಯಾದವ್ ಅವರು ಮಾಧ್ಯಮಗಳಿಗೆ ಮಾಹಿತಿ ಒದಗಿಸಿದ್ದಾರೆ.

English summary

Indian Railway Will Conduct Exams From December 15 For Recruitment Of 1.4 Lakh Jobs

Job applications received pre covid time by Indian Railway for 1.4 lakh posts, exams will be conducted from December 15.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X