For Quick Alerts
ALLOW NOTIFICATIONS  
For Daily Alerts

ರೆಪೋ ಮತ್ತು ರಿವರ್ಸ್ ರೆಪೋ ದರ ಏಕೆ ಬದಲಾಗಿಲ್ಲ? 7ನೇ ಬಾರಿಗೆ ಯಥಾಸ್ಥಿತಿ ಕಾಯ್ದುಕೊಂಡ RBI

|

ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ನಡೆದ ಹಣಕಾಸು ನೀತಿ ಸಮಿತಿ (ಎಂಪಿಸಿ) ದ್ವೈಮಾಸಿಕ ಪರಿಶೀಲನಾ ಸಭೆಯ ಅಂತ್ಯದ ಬಳಿಕ ರೆಪೋ ಹಾಗೂ ರಿವರ್ಸ್‌ ರೆಪೋ ದರವನ್ನು ಬದಲಾವಣೆ ಮಾಡದೆ ಉಳಿಸಿಕೊಂಡಿತು. ರೆಪೋ ದರವನ್ನ ಶೇ. 4ರಷ್ಟು ಮತ್ತು ರಿವರ್ಸ್ ರೆಪೋ ದರವನ್ನು ರಿವರ್ಸ್ ರೆಪೋ ದರವನ್ನು ಶೇ. 3.5ರಷ್ಟು ಉಳಿಸಿಕೊಂಡಿತು.

ಈ ರೀತಿಯಲ್ಲಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಿಕೆ ಇದೇ ಮೊದಲೇನಲ್ಲಿ ಆರ್‌ಬಿಐ ಸತತ ಏಳನೇ ಬಾರಿಗೆ ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಈ ಹಿಂದೆ 2020ರ ಮೇ 22ರಂದು ಆರ್‌ಬಿಐ ರೆಪೋ ದರದಲ್ಲಿ ಕಡಿತ ಮಾಡಿತ್ತು.

ಆದರೆ ಇದುವರೆಗೂ ರೆಪೋದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಈ ಬಾರಿ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಸಲುವಾಗಿ ಹಣದುಬ್ಬರ ಪ್ರಮಾಣವನ್ನು ಮಿತಿಯಲ್ಲಿ ಇರಿಸುವ ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಹಣಕಾಸು ನೀತಿ ಸಮಿತಿ ಸರ್ವಾನುಮತದಿಂದ ನಿರ್ಧಾರಕ್ಕೆ ಬಂದಿರುವುದಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದರು.

5-1ರ ಬಹುಮತ ಸಿಕ್ಕಿದೆ

5-1ರ ಬಹುಮತ ಸಿಕ್ಕಿದೆ

ರೆಪೋ ದರ ಮತ್ತು ರಿವರ್ಸ್ ರೆಪೋ ದರ ಬದಲಾವಣೆ ಮಾಡದಂತೆ ಎಂಪಿಸಿ ಸಭೆಯಲ್ಲಿ 5-1ರ ಬಹುಮತ ವ್ಯಕ್ತವಾಯಿತು. ಒಬ್ಬ ಸದಸ್ಯರು ಮಾತ್ರ ಬದಲಾವಣೆ ಪರ ಮತ ಚಲಾಯಿಸಿದರು. ಈ ನಿರ್ಧಾರದೊಂದಿಗೆ ಆರ್‌ಬಿಐ ತನ್ನ ಪ್ರಮುಖ ಮಾನದಂಡದ ದರವನ್ನು ಏಳನೇ ಬಾರಿಗೆ ಬದಲಾವಣೆ ಮಾಡದೆ ಉಳಿಸಿಕೊಂಡಿದೆ. ಪ್ರಸ್ತುತದ ಹಣಕಾಸು ವರ್ಷದಲ್ಲಿ ದರದಲ್ಲಿ ಶೇ 9.5ರ ಗುರಿಯನ್ನು ಆರ್‌ಬಿಐ ಉಳಿಸಿಕೊಂಡಿದೆ. ಸಿಪಿಐ ಹಣದುಬ್ಬರ ಅಂದಾಜನ್ನು ಶೇ 5.1ರಿಂದ ಶೇ 5.7ಕ್ಕೆ ಹೆಚ್ಚಿಸಲಾಗಿದೆ.

ರೆಪೋ ಮತ್ತು ರಿವರ್ಸ್‌ ರೆಪೋ ದರ ಮತ್ತೆ ಬದಲಾವಣೆ ಇಲ್ಲ: ರೆಪೋ ದರ ಶೇ. 4ರಷ್ಟು ಮುಂದುವರಿಕೆರೆಪೋ ಮತ್ತು ರಿವರ್ಸ್‌ ರೆಪೋ ದರ ಮತ್ತೆ ಬದಲಾವಣೆ ಇಲ್ಲ: ರೆಪೋ ದರ ಶೇ. 4ರಷ್ಟು ಮುಂದುವರಿಕೆ

ಆರ್ಥಿಕ ತಜ್ಞರು ಈ ಮೊದಲೇ ಅಂದಾಜಿಸಿದ್ದರು

ಆರ್ಥಿಕ ತಜ್ಞರು ಈ ಮೊದಲೇ ಅಂದಾಜಿಸಿದ್ದರು

ರೆಪೋ ಮತ್ತು ರಿವರ್ಸ್ ರೆಪೋದರವು ಶೇ. 4ರಷ್ಟೇ ಉಳಿಸಿಕೊಳ್ಳಲಾಗುವುದು ಎಂದು ಆರ್ಥಿಜ ತಜ್ಞರು ಅಂದಾಜಿಸಿದ್ದರು. ಕಳೆದ ವರ್ಷ ಮೇ ತಿಂಗಳಿನಿಂದ ಶೇ 4ರಲ್ಲಿ ಸ್ಥಗಿತಗೊಂಡಿರುವ ರೆಪೋ ದರದಲ್ಲಿ ಬದಲಾವಣೆ ಮಾಡುವ ಅಗತ್ಯ ತಮಗೆ ಕಾಣಿಸುತ್ತಿಲ್ಲ ಎಂದು ಕಳೆದ ತಿಂಗಳು 61 ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು.

ಭಾರತದ ಆರ್ಥಿಕತೆ ನಿಧಾಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ

ಭಾರತದ ಆರ್ಥಿಕತೆ ನಿಧಾಗತಿಯಲ್ಲಿ ಚೇತರಿಸಿಕೊಳ್ಳುತ್ತಿದೆ

ಕೊರೊನಾ ವೈರಸ್‌ ಆರಂಭಿಕ ಆಘಾತದಿಂದ ಆರ್ಥಿಕತೆ ತತ್ತರಿಸಿದ ಸಂದರ್ಭದಲ್ಲಿ 2020ರ ಮಾರ್ಚ್ ತಿಂಗಳಿನಿಂದ ರೆಪೋ ದರವನ್ನು 115 ಆಧಾರ ಅಂಶಗಳಷ್ಟು ಕಡಿತಗೊಳಿಸಲಾಗಿದೆ. ಅಲ್ಪ ಕಾಲದ ಹೊಡೆತದ ಬಳಿಕ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಕೆಲವು ಅಧಿಕ ಆವರ್ತನ ಸಂಕೇತಗಳು ಚೇತರಿಕೆಯನ್ನು ಸೂಚಿಸುತ್ತಿವೆ ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ.

ಭಾರತದ ಆರ್ಥಿಕ ಬೆಳವಣಿಗೆ ದರವನ್ನ ಶೇ. 9.5ಕ್ಕೆ ತಗ್ಗಿಸಿದ IMF

ಭಾರತದ ಆರ್ಥಿಕ ಬೆಳವಣಿಗೆ ದರವನ್ನ ಶೇ. 9.5ಕ್ಕೆ ತಗ್ಗಿಸಿದ IMF

ಇತ್ತೀಚೆಗಷ್ಟೇ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) 2021-22ರ ಹಣಕಾಸು ವರ್ಷದ ಭಾರತದ ಆರ್ಥಿಕ ಬೆಳವಣಿಗೆಯ ದರವನ್ನು ಈ ಹಿಂದಿನ ಶೇಕಡಾ 12.5ರಿಂದ ಶೇಕಡಾ 9.5ಕ್ಕೆ ಇಳಿಸಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ದರದ ಕುರಿತು ಐಎಂಎಫ್‌ ಮುನ್ಸೂಚನೆ ದರವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಅಂದಾಜನ್ನು ಹೋಲುತ್ತವೆ.

 

ಭಾರತದ ಆರ್ಥಿಕತೆಯ ಭವಿಷ್ಯವೇನು?

ಭಾರತದ ಆರ್ಥಿಕತೆಯ ಭವಿಷ್ಯವೇನು?

ಸದ್ಯ ಕೋವಿಡ್-19 ರ ಎರಡನೇ ತರಂಗದ ಮುಕ್ತಾಯ ಹಾಗೂ ಮೂರನೇ ತರಂಗದ ಭೀತಿ ನಡುವೆ ದೇಶದ ಚೇತರಿಕೆಗೆ ಅಡ್ಡಿಯಾಗುತ್ತಿದ್ದರೂ ಸಹ, ಭಾರತದ ಆರ್ಥಿಕತೆಯು 2021 ರಲ್ಲಿ ಶೇಕಡಾ 8.3 ಮತ್ತು 2022 ರಲ್ಲಿ ಶೇಕಡಾ 7.5 ರಷ್ಟಾಗುತ್ತದೆ ಎಂದು ಈ ಹಿಂದೆ ವಿಶ್ವ ಬ್ಯಾಂಕ್ ಅಂದಾಜಿಸಿದೆ.

ಆದಾಗ್ಯೂ ಐಎಂಎಫ್ ಮುಂದಿನ ಹಣಕಾಸು ವರ್ಷದಲ್ಲಿ (FY 23) ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 8.5 ರಷ್ಟು, ಅದರ ಹಿಂದಿನ ದರಕ್ಕಿಂತ 160 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ ಎಂದು ಅಂದಾಜಿಸಿದೆ.

 

English summary

RBI MPC August 2021: Why RBI keeps repo rate and Reverse Repo rate unchanged for 7th time?

here the details of why rbi keeps repo and reverse repo rate unchanged of 7th time today
Story first published: Friday, August 6, 2021, 14:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X