For Quick Alerts
ALLOW NOTIFICATIONS  
For Daily Alerts

Budget 2023 Expectations: ಕೇಂದ್ರ ಬಜೆಟ್‌ನಿಂದ ಎಂಎಸ್‌ಎಂಇ ವಲಯದ ನಿರೀಕ್ಷೆಗಳೇನು?

|

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಲಿದ್ದಾರೆ. ಈ ಬಜೆಟ್ ಮೇಲೆ ಬೇರೆ ಬೇರೆ ವಲಯಗಳು ತಮ್ಮದೇ ಆದ ನಿರೀಕ್ಷೆಯನ್ನು ಹೊಂದಿದೆ. ಮೈಕ್ರೋ, ಸ್ಮಾಲ್, ಮೀಡಿಯಂ ಎಂಟರ್‌ಪ್ರೈಸಸ್ (MSME) ವಲಯವು ಕೂಡಾ ಹಲವಾರು ಬೇಡಿಕೆಗಳನ್ನು ಹೊಂದಿದೆ. ಪ್ರಸ್ತುತ ಸುಮಾರು 60 ಮಿಲಿಯನ್ ಸಂಸ್ಥೆಗಳು ಎಂಎಸ್‌ಎಂಇ ಅಡಿಯಲ್ಲಿ ಬರುತ್ತದೆ. ಹಾಗೆಯೇ ಭಾರತದ ಒಟ್ಟು ಉತ್ಪಾದನ ವಲಯಕ್ಕೆ ಶೇಕಡ 45ರಷ್ಟು ಕೊಡುಗೆಯನ್ನು ನೀಡುತ್ತಿದೆ.

ಈ ಹಿಂದಿನ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎಂಎಸ್‌ಎಂಇ ವಲಯದ ಅಭಿವೃದ್ಧಿಗಾಗಿ ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಭಾರೀ ನಷ್ಟವನ್ನು ಹೊಂದಿದ್ದ ವಲಯಕ್ಕೆ ಸಹಾಯವನ್ನು ಮಾಡಿದ್ದರು. ದೇಶದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಕೊಡುಗೆಯನ್ನು ಎಂಎಸ್‌ಎಂಇ ವಲಯವು ನೀಡುತ್ತಿದೆ ಎಂಬುವುದು ಗಮನಾರ್ಹ.

SBI e-Mudra ಸಾಲಕ್ಕೆ ಅರ್ಜಿ ಹಾಕುವುದು ಹೇಗೆ? ವಿವರ ತಿಳಿಯಿರಿSBI e-Mudra ಸಾಲಕ್ಕೆ ಅರ್ಜಿ ಹಾಕುವುದು ಹೇಗೆ? ವಿವರ ತಿಳಿಯಿರಿ

ಕಳೆದ ಕೆಲವು ವರ್ಷಗಳಿಂದ ಎಂಎಸ್‌ಎಂಇ ವಲಯಕ್ಕೆ ಮಾಡಲಾಗುತ್ತಿರುವ ಬಜೆಟ್ ಹಂಚಿಕೆಯು ಹೆಚ್ಚಳವಾಗುತ್ತಿದೆ. ಹಣಕಾಸು ವರ್ಷ 2020-21ರಲ್ಲಿ ಬಜೆಟ್‌ನಲ್ಲಿ ಎಂಎಸ್‌ಎಂಇಗೆ 7,572 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. 2021-22 ಹಣಕಾಸು ವರ್ಷದಲ್ಲಿ ಈ ನಿಧಿಯನ್ನು 15,699.65 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿತ್ತು. 2022-23 ಹಣಕಾಸು ವರ್ಷದಲ್ಲಿ ನಿಧಿ ಹಂಚಿಕೆ 21,422 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಬೇರೆ ವಲಯಗಳಂತೆ ಎಂಎಸ್‌ಎಂಇ ಕೂಡಾ ಬಜೆಟ್‌ನಿಂದ ತನ್ನದೇ ಆದ ನಿರೀಕ್ಷೆಯನ್ನು ಹೊಂದಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

  ಹಣಕಾಸು ಲಭ್ಯತೆ

ಹಣಕಾಸು ಲಭ್ಯತೆ

ಅಗತ್ಯವಿದ್ದ ಸಂದರ್ಭದಲ್ಲಿ ನಿಧಿ ಲಭ್ಯವಾಗದೆ ಇರುವುದೇ ಎಂಎಸ್‌ಎಂಇ ವಲಯದ ಪ್ರಮುಖ ಸಮಸ್ಯೆಯಾಗಿದೆ. ಈ ವಲಯಕ್ಕೆ ಸಮಯಕ್ಕೆ ಸರಿಯಾಗಿ ಹಣಕಾಸು ಸಹಾಯ ಲಭ್ಯವಾಗುವ ಅವಶ್ಯಕತೆಯಿದೆ. ಇದಕ್ಕಾಗಿ ಸಿಜಿಟಿಎಂಎಸ್‌ಇ (Credit Guarantee fund Trust for Micro and Small Enterprises) ಬಡ್ಡಿದರವನ್ನು ಕಡಿತ ಮಾಡಬೇಕು ಎಂಬ ನಿರೀಕ್ಷೆಯನ್ನು ಹೊಂದಿದೆ. ಈ ವಲಯಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗುವುದು ಮುಖ್ಯವಾಗಿದೆ ಎಂದು ಪಾರ್ಟ್‌ನರ್ ಡೆಲಾಯ್ಟ್‌ನ ಸಂಜಯ್ ಕುಮಾರ್ ಹೇಳಿದ್ದಾರೆ. ಪ್ರಸ್ತುತ ಕನಿಷ್ಠ ಬಡ್ಡಿದರ ಶೇಕಡ 18 ಆಗಿದೆ. ಇದು ದೊಡ್ಡ ಸಂಸ್ಥೆಗಳಿಗೆ ಸಮಸ್ಯೆಯಾಗಲ್ಲ, ಆದರೆ ಕೆಲವು ಸಣ್ಣ ಸಂಸ್ಥೆಗಳಿಗೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದ್ದಾರೆ.

 ಪ್ರೊಡೆಕ್ಷನ್ ಲಿಂಕ್ಡ್ ಇನ್ಸೆಂಟೀವ್ಸ್  (ಪಿಎಲ್ಐ)

ಪ್ರೊಡೆಕ್ಷನ್ ಲಿಂಕ್ಡ್ ಇನ್ಸೆಂಟೀವ್ಸ್ (ಪಿಎಲ್ಐ)

ಪಿಎಲ್ಐ ಯೋಜನೆಯು ಎಂಎಸ್‌ಎಂಇ ವಲಯದಲ್ಲಿ ಉತ್ಪಾದನೆ ಹಾಗೂ ರಫ್ತು ಸಾಮರ್ಥ್ಯವನ್ನು ಹೆಚ್ಚಳ ಮಾಡುತ್ತದೆ. ಸರ್ಕಾರವು ಎಂಎಸ್‌ಎಂಇಯನ್ನು ಸಾಂಪ್ರಾದಾಯಿಕಗೊಳಿಸಬೇಕು ಹಾಗೂ ದೊಡ್ಡ ಸಂಸ್ಥೆಗಳಿಗೆ ಲಭ್ಯವಾಗುವ ಪ್ರೋತ್ಸಾಹ ಧನ ಸಣ್ಣ ಸಂಸ್ಥೆಗಳಿಗೂ ಲಭ್ಯವಾಗಬೇಕು ಎಂಬುವುದು ಬೇಡಿಕೆಯಾಗಿದೆ. "ಕೆಲವು ಎಂಎಸ್‌ಎಂಇ ಸಂಸ್ಥೆಗಳು ಬರೀ ನಗದಿನ ಮೇಲೆ ನಿಂತಿದೆ. ಅದರಿಂದಾಗಿ ಬೇರೆ ಹಣಕಾಸು ಮೂಲವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಾಗಿ ಎಂಎಸ್‌ಎಂಇ ಸೆಕ್ಟರ್‌ ಅನ್ನು ಔಪಾಚಾರಿಕಗೊಳಿಸುವುದು ಅತೀ ಮುಖ್ಯವಾಗಿದೆ," ಎಂದು ಪಾರ್ಟ್‌ನರ್ ಡೆಲಾಯ್ಟ್‌ನ ಸಂಜಯ್ ಕುಮಾರ್ ಹೇಳಿದ್ದಾರೆ.

 ಬಜೆಟ್‌: ರಫ್ತು

ಬಜೆಟ್‌: ರಫ್ತು

ಎಂಎಸ್‌ಎಂಇ ವಲಯವು ದೇಶದ ಒಟ್ಟು ರಫ್ತಿನಲ್ಲಿ ಶೇಕಡ 40ರಷ್ಟು ಪಾಲನ್ನು ಹೊಂದಿದೆ. ಈ ವಲಯದಲ್ಲಿ ರಫ್ತನ್ನು ಹೆಚ್ಚಳ ಮಾಡಬೇಕಾದರೆ, ಸಂಸ್ಥೆಯಲ್ಲಿ ಉತ್ಪಾದನೆ ಹೆಚ್ಚಳ ಮಾಡಬೇಕಾಗುತ್ತದೆ. ಅದಕ್ಕಾಗಿ ನಾವು ಸ್ಥಳೀಯ ಮೌಲ್ಯವನ್ನು ಮತ್ತು ಅಂತಾರಾಷ್ಟ್ರೀಯ ಮೌಲ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಇವೆರಡು ಜೊತೆಯಾಗಿ ಕಾರ್ಯನಿರ್ವಹನೆ ಮಾಡಿದಾಗ ಎಂಎಸ್‌ಎಂಇ ವಲಯವು ಇನ್ನು ಹೆಚ್ಚು ಕಲಿಯಲು ಸಾಧ್ಯವಾಗುತ್ತದೆ," ಎಂದು ಸಂಜಯ್ ಕುಮಾರ್ ತಿಳಿಸಿದ್ದಾರೆ. ಸರ್ಕಾರವು ಪ್ರೋತ್ಸಾಹ ಧನವನ್ನು ನೀಡಬೇಕು ಇದರಿಂದಾಗಿ ಸಂಸ್ಥೆಯ ಅಭಿವೃದ್ಧಿಯಾಗುತ್ತದೆ. ಈ ಅಭಿವೃದ್ಧಿಯು ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ.

English summary

Union Budget 2023: MSME sector Expectation From The Budget, Details in Kannada

Union Budget 2023: MSME sector in India may have many expectations from the Union budget, here we list out some expectations, Read on.
Story first published: Thursday, January 26, 2023, 14:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X