For Quick Alerts
ALLOW NOTIFICATIONS  
For Daily Alerts

ನವೆಂಬರ್ ನಲ್ಲಿ ಈ ಫಿಕ್ಸೆಡ್ ಡಿಪಾಸಿಟ್ಸ್ ಗಳಲ್ಲಿ ಹೂಡಿಕೆ ಮಾಡಿ

ಪ್ರತಿ ತಿಂಗಳ ಪ್ರಾರಂಭದಲ್ಲಿ ಅತಿ ಹೆಚ್ಚು ಬಡ್ಡಿದರ ಕೊಡುವ ಫಿಕ್ಸೆಡ್ ಡಿಪಾಸಿಟ್ ಗಳಲ್ಲಿ ಹಣ ಹೂಡಿಕೆ ಮಾಡಬೇಕೆನ್ನುವುದು ಹಣಕಾಸು ಯೋಜನೆ ಮಾಡುವವರ ಹವ್ಯಾಸವಾಗಿರುತ್ತದೆ.

By Siddu
|

ಪ್ರತಿ ತಿಂಗಳ ಪ್ರಾರಂಭದಲ್ಲಿ ಅತಿ ಹೆಚ್ಚು ಬಡ್ಡಿದರ ಕೊಡುವ ಫಿಕ್ಸೆಡ್ ಡಿಪಾಸಿಟ್ ಗಳಲ್ಲಿ ಹಣ ಹೂಡಿಕೆ ಮಾಡಬೇಕೆನ್ನುವುದು ನಿಯಮಿತವಾಗಿ ಹಣಕಾಸು ಯೋಜನೆ ಮಾಡುವವರ ಹವ್ಯಾಸವಾಗಿರುತ್ತದೆ.

ಅಂತವರು ಪ್ರತಿ ತಿಂಗಳು ಯಾವ ಬ್ಯಾಂಕು ಅಥವಾ ಕಂಪನಿಗಳು ಉತ್ತಮ ಬಡ್ಡಿದರ ಕೊಡುತ್ತವೆ ಎಂಬುದನ್ನು ನೋಡುತ್ತಿರುತ್ತಾರೆ. ಅಂದರೆ ಪ್ರತಿ ತಿಂಗಳು ಪಡೆಯುವ ಸಂಬಳದಲ್ಲಿ ನಿರ್ಧಿಷ್ಟವಾದ ಹಣವನ್ನು ಉಳಿತಾಯ ಮಾಡಬೇಕೆನ್ನುವುದು ಅವರ ಇಚ್ಛೆಯಾಗಿರುತ್ತದೆ. ಸಂಬಳ ಪಡೆಯುವ ಅಥವಾ ವ್ಯವಹಾರ ಮಾಡುವವರು ಪ್ರತಿ ತಿಂಗಳ ಪ್ರಾರಂಭದಲ್ಲಿ ಹೂಡಿಕೆ ಮಾಡುವ ಕುರಿತು ಯೋಜನೆ ಮಾಡುವುದು ವಾಡಿಕೆ. ಫಿಕ್ಸೆಡ್ ಡಿಪಾಸಿಟ್ ಹೂಡಿಕೆಗೆ ಮುನ್ನ ಇಲ್ಲೊಮ್ಮೆ ನೋಡಿ

ಅದಾಗ್ಯೂ, ನವೆಂಬರ್ ತಿಂಗಳಿನಲ್ಲಿ ಹಣವನ್ನು ಉಳಿತಾಯ/ಹೂಡಿಕೆ ಮಾಡಲು ಸುರಕ್ಷಿತವಾಗಿರುವ ಮತ್ತು ಹೆಚ್ಚು ಬಡ್ಡಿದರ ಕೊಡುವ ಫಿಕ್ಸೆಡ್ ಡಿಪಾಸಿಟ್ ಗಳ ಮಾಹಿತಿ ಇಲ್ಲಿದೆ.

1. ಡಿಎಚ್ಎಫ್ಎಲ್ ಆಶ್ರಯ

1. ಡಿಎಚ್ಎಫ್ಎಲ್ ಆಶ್ರಯ

ಈ ಫಿಕ್ಸೆಡ್ ಡಿಪಾಸಿಟ್ ಕುರಿತು ವಿಶ್ಲೇಷಿಸುವ ಮುನ್ನ ಡಿಎಚ್ಎಫ್ಎಲ್ ಆಶ್ರಯ ಕಂಪನಿ ದೇಶದ ಟಾಪ್ 5 ಕಂಪನಿಗಳಲ್ಲಿ ಒಂದಾಗಿದೆ ಎನ್ನುವುದು ತಿಳಿಯಬೇಕಾಗಿದೆ. ಇದು ದಿವಾನ್ ಹೌಸಿಂಗ್ ಎಂದೇ ಪ್ರಸಿದ್ದಿ ಪಡೆದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 29ರೊಂದಿಗೆ 233 ಕೋಟಿ ನಿವ್ವಳ ಲಾಭ ಗಳಿಸಿದೆ. ಡಿಎಚ್ಎಫ್ಎಲ್ ಸ್ಥಿರ ಠೇವಣಿಗಳು ಎಎಎ ರೇಟೆಡ್ ಆಗಿದ್ದು, ತುಂಬಾ ಸುರಕ್ಷಿತ ಎಂದು ಹೆಸರು ಪಡೆದಿವೆ. ಸ್ಥಿರ ಠೇವಣಿಗಳ ಮೇಲೆ ಹೆಚ್ಚು ಬಡ್ಡಿದರ ಬೇಕೆ? ಇಲ್ಲಿವೆ 8 ಮಾರ್ಗ

2. ಡಿಎಚ್ಎಫ್ಎಲ್ ಆಶ್ರಯ ಫ್ಲಸ್ ಫಿಕ್ಸೆಡ್ ಡಿಪಾಸಿಟ್

2. ಡಿಎಚ್ಎಫ್ಎಲ್ ಆಶ್ರಯ ಫ್ಲಸ್ ಫಿಕ್ಸೆಡ್ ಡಿಪಾಸಿಟ್

ಒಂದು ವರ್ಷದ ಅವಧಿಯ FD ಮೇಲೆ ಹಣ ಹೂಡಿಕೆ ಮಾಡಿದರೆ ನಿಮಗೆ ಶೇ. 8.25ರಷ್ಟು ಬಡ್ಡಿದರ ಸಿಗುತ್ತದೆ.
ಆದರೆ ಬ್ಯಾಂಕುಗಳು ಇದೇ ಅವಧಿಗೆ ಕೇವಲ ಶೇ. 7.25ರಷ್ಟು ಬಡ್ಡಿದರ ನೀಡುತ್ತವೆ. ಎರಡು ವರ್ಷದ ಅವಧಿಯ ಫಿಕ್ಸೆಡ್ ಡಿಪಾಸಿಟ್ ಮೇಲೆ ಶೇ. 8.50ರಷ್ಟು ಹಾಗೂ ಮೂರು ವರ್ಷದ FD ಮೇಲೆ ಶೇ. 8.60ರಷ್ಟು ಬಡ್ಡಿದರ ಪಡೆಯಬಹುದಾಗಿದೆ. ಇದು ದೇಶದಲ್ಲಿನ ಇನ್ನಿತರ ಕಂಪನಿ ಹಾಗೂ ಬ್ಯಾಂಕುಗಳ FDಗಳಿಗೆ ಹೋಲಿಸಿದರೆ ಅತ್ಯುತ್ತಮ ಬಡ್ಡಿದರ ಎನ್ನಲಾಗಿದೆ.
ಹಿರಿಯ ನಾಗರಿಕರಿಗೆ ಶೇ. 0.25ರಷ್ಟು ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಮೂರು ವರ್ಷಗಳ ಅವಧಿಯ FD ಮೇಲೆ ಹೂಡಿಕೆ ಮಾಡಿದರೆ ಹೆಚ್ಚುವರಿ ಪ್ರತಿಫಲ ಸಿಗುತ್ತದೆ. ನವೆಂವರ್ ತಿಂಗಳಲ್ಲಿ ಹೆಚ್ಚು ಬಡ್ಡಿದರ ಕೊಡುವ FD ಇದಾಗಿದೆ.

3. ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಉನ್ನತಿ

3. ಶ್ರೀರಾಮ್ ಟ್ರಾನ್ಸ್ಪೋರ್ಟ್ ಫೈನಾನ್ಸ್ ಉನ್ನತಿ

ಶ್ರೀರಾಮ್ ಟ್ರಾನ್ಸ್ಪೋರ್ಟ್ ದೇಶದಲ್ಲಿನ ಅತಿ ದೊಡ್ಡ ವಾಣಿಜ್ಯ ವಾಹನ ಹಣಕಾಸು ಫೈನಾನ್ಸ್ ಸಂಸ್ಥೆಯಾಗಿದೆ. ಇದು 1979ರಲ್ಲಿ ಪ್ರಾರಂಭವಾಗಿದ್ದು, ದೇಶದ ಅತಿದೊಡ್ಡ ಹಣಕಾಸು ಆಸ್ತಿಯಾಗಿದೆ.
ಈ ಕಂಪನಿ ಸರಕು ಬಿಲ್ ಮತ್ತು ಕೋ ಬ್ರಾಂಡೆಡ್ ಕ್ರೆಡಿಟ್ ಕಾರ್ಡುಗಳನ್ನು ಒದಗಿಸುತ್ತದೆ. ಕಳೆದ ಕೆಲ ವರ್ಷಗಳಿಂದ ಕಂಪನಿ ನಿವ್ವಳ ಲಾಭದಲ್ಲಿದ್ದು, ಅನೇಕ ವರ್ಷಗಳಿಂದ ಲಾಭಾಂಶಗಳನ್ನು ಪಾವತಿ ಮಾಡುತ್ತಿದೆ.
ಕಂಪನಿಯ ನಿಶ್ಚಿತ ಠೇವಣಿಗಳು CRISIL ನಿಂದ FAAA ದರ್ಜೆಯವು ಹಾಗೂ ಸುರಕ್ಷಿತವಾದವುಗಳೆಂದು ಮಾನ್ಯತೆ ಪಡೆದಿವೆ.

4. ಶ್ರೀರಾಮ್ ಫೈನಾನ್ಸ್ ಉನ್ನತಿ ಫಿಕ್ಸೆಡ್ ಡಿಪಾಸಿಟ್

4. ಶ್ರೀರಾಮ್ ಫೈನಾನ್ಸ್ ಉನ್ನತಿ ಫಿಕ್ಸೆಡ್ ಡಿಪಾಸಿಟ್

ಶ್ರೀರಾಮ್ ಫೈನಾನ್ಸ್ ಐದು ವರ್ಷಗಳ ಅವಧಿಯ ಫಿಕ್ಸೆಡ್ ಡಿಪಾಸಿಟ್ ಮೇಲೆ ಶೇ. 8.5ರಷ್ಟು ಬಡ್ಡಿದರ ಘೋಷಿಸಿದೆ. 4 ವರ್ಷಗಳ FD ಮೇಲೆ ಶೇ. 8.45ರಷ್ಟು ಹಾಗೂ 3 ವರ್ಷಗಳ FD ಮೇಲೆ ಶೇ. 8.25ರಷ್ಟು ಬಡ್ಡಿದರ ನೀಡುತ್ತಿದೆ.
ಈ ಕಂಪನಿಯ FD ಗಳಿಗೆ ಟಿಡಿಎಸ್ ಅನ್ವಯವಾಗುತ್ತದೆ ಎಂಬುದನ್ನು ಗಮನಿಸಬೇಕು. ಬಡ್ಡಿ ಆದಾಯ ರೂ. 5000 ಕ್ಕಿಂತ ಹೆಚ್ಚಿದ್ದರೆ ಟಿಡಿಎಸ್ ಕಡಿತವಾಗುತ್ತದೆ. ಆದರಿಂದ ಇಂತಹ ಅಂಶಗಳ ಆಧಾರದ ಮೇಲೆ ಪ್ರತಿಫಲವನ್ನು ನಿರ್ಧರಿಸಿ. ಅಲ್ಪಾವಧಿ ಹೂಡಿಕೆಗಾಗಿ ಭಾರತದಲ್ಲಿನ ಉತ್ತಮ ಖಾತೆಗಳು

5. ಬಜಾಜ್ ಫೈನಾನ್ಸ್

5. ಬಜಾಜ್ ಫೈನಾನ್ಸ್

ಈ ಕಂಪನಿಯ ಫಿಕ್ಸೆಡ್ ಡಿಪಾಸಿಟ್ FAAA ರೇಟೆಡ್ ಆಗಿದೆ ಎಂದು ಕ್ರಿಸಿಲ್ ಪ್ರಮಾಣೀಕರಿಸಿದೆ. ಐಸಿಆರ್ಎ MAAA ರೇಟಿಂಗ್ ನೀಡಿದೆ. ಇದು ಸುರಕ್ಷತೆಗೆ ನೀಡಬಹುದಾದ ಅತಿ ಹೆಚ್ಚಿನ ರೇಟಿಂಗ್ ಆಗಿದ್ದು, ಬಜಾಜ್ ಫೈನಾನ್ಸ್ ದೇಶದ ಸುಸ್ಥಿರ ಕಂಪನಿಯಾಗಿ ನೆಲೆ ನಿಂತಿದೆ.
ಶೇ. 8.25 ದರದಂತೆ ಬಡ್ಡಿದರ ಒದಗಿಸುತ್ತದೆ. ಠೇವಣಿಯ ಕನಿಷ್ಟ ಮೊತ್ತ ರೂ. 75,000 ಆಗಿದೆ. ಒಂದು ಕೋಟಿಗಿಂತ ಹೆಚ್ಚಿನ ಹೂಡಿಕೆ ಮೇಲೆ ಶೇ. 0.25ರಷ್ಟು ಹೆಚ್ಚುವರಿ ಬಡ್ಡಿದರ ಪಡೆಯಹುದಾಗಿದೆ. ದೇಶದ ಯಾವುದೇ ಬ್ಯಾಂಕುಗಳು ಶೇ. 8.25 ಬಡ್ಡಿದರವನ್ನು ಪಾವತಿಸುವುದಿಲ್ಲ.

6. ಕೆಟಿಡಿಎಫ್ಸಿ(KTDFC)

6. ಕೆಟಿಡಿಎಫ್ಸಿ(KTDFC)

ಕೆಟಿಡಿಎಫ್ಸಿ ಕೇರಳ ಸರ್ಕಾರದ ಉದ್ಯಮವಾಗಿDFDU, ಇದು ಸುರಕ್ಷಿತವಾದ ಕಂಪನಿ. ಇದರ ಬಗ್ಗೆ ಕೇರಳ ಸರ್ಕಾರ ಭದ್ರತೆ ಒದಗಿಸಿದೆ.
1, 2 ರಿಂದ 3 ವರ್ಷಗಳ ಅವಧಿಯ ಡಿಪಾಸಿಟ್ಸ್ ಗಳ ಮೇಲೆ ಶೇ. 8.50ರಷ್ಟು ಬಡ್ಡಿದರ ಒದಗಿಸುತ್ತದೆ.
ಹಿರಿಯ ನಾಗರಿಕರಿಗೆ 1, 2 ರಿಂದ 3 ವರ್ಷಗಳ ಅವಧಿಯ ಡಿಪಾಸಿಟ್ಗಳ ಮೇಲೆ ಶೇ. 8.75ರಷ್ಟು ಬಡ್ಡಿದರ ನೀಡುತ್ತದೆ. ಇದು ಕೇರಳ ಸರ್ಕಾರದ ಸಂಸ್ಥೆಯಾಗಿರುವುದರಿಂದ ದರ್ಜೆ ಹಾಗೂ ಸುರಕ್ಷತೆ ಬಗ್ಗೆ ಯಾವುದೇ ಅನುಮಾನವಿಲ್ಲ.

7. ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಸಿಯಲ್ ಸರ್ವಿಸಸ್

7. ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಸಿಯಲ್ ಸರ್ವಿಸಸ್

ಮಹಿಂದ್ರಾ ಮತ್ತು ಮಹಿಂದ್ರಾ ಫೈನಾನ್ಸಿಯಲ್ ಸರ್ವಿಸಸ್ ಬೇರೆ ಕಂಪನಿಗಳಂತೆ ಅತಿ ಹೆಚ್ಚು ಬಡ್ಡಿದರವನ್ನು ಘೋಷಣೆ ಮಾಡುತ್ತಿಲ್ಲ. ಕೆಲ ತಿಂಗಳ ಹಿಂದೆ ಇದರ ಬಡ್ಡಿದರ ಹೆಚ್ಚಾಗಿತ್ತು.
ಇದು ಒಂದು ವರ್ಷದ ಅವಧಿಯ FD ಮೇಲೆ ಶೇ. 7.90ರಷ್ಟು ಬಡ್ಡಿದರ ನೀಡುತ್ತಿದೆ. ಎರಡು ವರ್ಷದ ಅವಧಿಯ ಹೂಡಿಕೆ ಮೇಲೆ ಶೇ. 8ರಷ್ಟು ಹಾಗೂ ಇತರೆ ಅವಧಿಗಳ ಮೇಲೆ ಶೇ. 8.05ರಷ್ಟು ಬಡ್ಡಿದರ ಘೋಷಿಸಿದೆ. ಈ ಕಂಪನಿಯ FD ಗಳು ತುಂಬಾ ಸುರಕ್ಷಿತವಾದವುಗಳಾಗಿವೆ.

8. ಹಕ್ಕುತ್ಯಾಗ

8. ಹಕ್ಕುತ್ಯಾಗ

ಕಂಪನಿಗಳ ಎಫ್ಡಿಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ ಎಂದೇ ಹೇಳಬಹುದು. ಹೀಗಾಗಿ ವೃತ್ತಿಪರರ ಸಲಹೆ ಪಡೆಯುವುದು ಉತ್ತಮ ಮಾರ್ಗ. ಈ ಲೇಖನದ ಮಾಹಿತಿ ಆಧರಿಸಿ ಸಂಭವಿಸಬಹುದಾದ ನಷ್ಟ/ಹಾನಿಯನ್ನು ಗ್ರೆಯ್ನಿಯಮ್ ಇನ್ಫಾರ್ರ್ಮೇಶನ್ ಟೆಕ್ನಾಲಜಿಸ್ ಪ್ರೈ. ಲಿ. ಹಾಗೂ ಇದರ ಅಂಗಸಂಸ್ಥೆಗಳು ಭರಿಸುವುದಿಲ್ಲ.

English summary

Companies Fixed Deposits That Offer Highest Interest Rates In november

Bank interest rates have no longer become attractive and the interest rates have dropped so low, it just about beats inflation.
Story first published: Thursday, November 3, 2016, 11:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X