For Quick Alerts
ALLOW NOTIFICATIONS  
For Daily Alerts

ಅಕ್ಟೋಬರ್.28ರ ಅಂಕಿ-ಅಂಶ: ಸೆನ್ಸೆಕ್ಸ್, ನಿಫ್ಟಿ ಮಾರುಕಟ್ಟೆಯ ಷೇರು ದರದಲ್ಲಿ ಭಾರಿ ಕುಸಿತ

|

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗುರುವಾರ ಆರಂಭದ ವೇಳೆಗೆ ಮಿಶ್ರ ಚಿತ್ರಣ ಕಂಡು ಬಂದಿದೆ. ಭಾರತೀಯ ಷೇರು ಸೂಚ್ಯಂಕ(ಬಿಎಸ್ಇ) ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ಎಸ್ಇ) ಅಂಕಗಳು ಮಾರುಕಟ್ಟೆ ಏರಿಳಿತದ ಜೊತೆಗೆ ಸ್ಥಿರ ಚಿತ್ರಣಕ್ಕೆ ಸಾಕ್ಷಿಯಾಗಿವೆ.

 

ಭಾರತೀಯ ಷೇರು ಮಾರುಕಟ್ಟೆ ವಹಿವಾಟು ಆರಂಭಕ್ಕೂ ಮೊದಲು ಏಷ್ಯನ್ ಷೇರು ಮಾರುಕಟ್ಟೆಗಳು ಕಡಿಮೆ ವಹಿವಾಟು ನಡೆಸುತ್ತಿದ್ದವು. ಜಪಾನ್‌ನ ನಿಕ್ಕಿ ಶೇಕಡಾ 1.2 ರಷ್ಟು ಕುಸಿದರೆ, ಟೋಪಿಕ್ಸ್ ಸೂಚ್ಯಂಕವು ಶೇ.1.13ರಷ್ಟು ಕುಸಿತ ಕಂಡಿದೆ. ನಿಫ್ಟಿ ಫ್ಯೂಚರ್ಸ್ ಸಿಂಗಾಪುರದ ಎಕ್ಸ್‌ಚೇಂಜ್‌ನಲ್ಲಿ 25 ಪಾಯಿಂಟ್ ಅಥವಾ ಶೇಕಡಾ 0.14 ರಷ್ಟು ಏರಿಕೆಯಾಗಿ 18,237 ರಲ್ಲಿ ವಹಿವಾಟು ನಡೆಸುತ್ತಿದೆ.

 

ಗುರುವಾರ ಬೆಳಗ್ಗೆ ಮಾರುಕಟ್ಟೆ ಆರಂಭದ ವೇಳೆಗೆ ಸೆನ್ಸೆಕ್ಸ್ 180 ಅಂಕ ಅಥವಾ ಶೇ.0.3ರಷ್ಟು ಏರಿಕೆಯೊಂದಿಗೆ 60955ರಲ್ಲಿ ದಿನದ ವಹಿವಾಟು ಶುರುವಾಯಿತು. ಅದೇ ರೀತಿ ನಿಫ್ಟಿ ಕೂಡಾ 61.10 ಅಂಕ ಅಥವಾ ಶೇ. 0.34ರಷ್ಟು ಅಂದರೆ 18,149.90 ಅಂಕಗಳಿಗೆ ಇಳಿಕೆಯಾಗಿದೆ.

ಅಕ್ಟೋಬರ್.28ರ ಅಂಕಿ-ಅಂಶ: ಸೆನ್ಸೆಕ್ಸ್, ನಿಫ್ಟಿ ಷೇರು ದರದಲ್ಲಿ ಕುಸಿತ

ಗುರುವಾರ ಷೇರು ಮಾರುಕಟ್ಟೆ ಆರಂಭದ ಹೊತ್ತಿಗೆ ಸುಮಾರು 1026 ಷೇರುಗಳಲ್ಲಿ ಏರಿಕೆ ಕಂಡು ಬಂದರೆ, 727 ಕಂಪನಿಯ ಷೇರುಗಳ ಬೆಲೆ ಇಳಿಮುಖವಾಗಿವೆ. ಇದರ ಮಧ್ಯೆ 86 ಕಂಪನಿಗಳ ಷೇರು ಬೆಲೆಯು ಸ್ಥಿರವಾಗಿರುವುದು ಕಂಡು ಬಂದಿದೆ. ಅಕ್ಟೋಬರ್ 28 ಗುರುವಾರದ ಷೇರು ಮಾರುಕಟ್ಟೆಯ ಆರಂಭಿಕ ಚಿತ್ರಣ ಹೇಗಿತ್ತು ಎಂಬುದರ ಕುರಿತು ಮಾಹಿತಿಗಾಗಿ ಮುಂದೆ ಓದಿ.

ಬಿಎಸ್ಇ ಷೇರುಪೇಟೆಯಲ್ಲಿ ಏರಿಳಿತ:

ಭಾರತೀಯ ಷೇರು ಸೂಚ್ಯಂಕ ಸೆನ್ಸಕ್ಸ್ ಮಾರುಕಟ್ಟೆಯಲ್ಲಿ ಏಷ್ಯನ್ ಪೇಂಟ್ಸ್ ಶೇ.5.16ರಷ್ಟು ಏರಿಕೆಯಾಗಿ 3,123ಕ್ಕೆ ತಲುಪಿದೆ. ಸನ್ ಫಾರ್ಮಾ, ಐಟಿಸಿ, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್, ಟಿಸಿಎಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಂಪನಿ ಷೇರುಗಳು ಕೂಡ ಏರಿಕೆಯಾಗಿವೆ. ಅದೇ ರೀತಿ ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಟೆಕ್ ಮಹೀಂದ್ರಾ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ ಕಂಪನಿ ಷೇರುಗಳ ಬೆಲೆಯು ಸೆನ್ಸೆಕ್ಸ್ ಮಾರುಕಟ್ಟೆಯಲ್ಲಿ ಅತಿಹೆಚ್ಚು ಇಳಿಕೆಯಾಗಿವೆ.

ಸೆನ್ಸೆಕ್ಸ್ ಮಾರುಕಟ್ಟೆಯಲ್ಲಿ ಕಂಪನಿಗಳ ಏರಿಳಿತ:

ಭಾರತೀಯ ಷೇರು ಸೂಚ್ಯಂಕ ಸೆನ್ಸೆಕ್ಸ್ ಮಾರುಕಟ್ಟೆಯು ಏರಿಕೆಯೊಂದಿಗೆ ಆರಂಭಗೊಂಡಿದ್ದು ತದನಂತರದಲ್ಲಿ ಇಳಿಮುಖವಾಗಿದೆ. ಈ ಮಧ್ಯೆ ಇಂಡಸ್‌ಇಂಡ್ ಬ್ಯಾಂಕ್, ಲಾರ್ಸೆನ್ ಮತ್ತು ಟೌಬ್ರೊ (ಎಲ್&ಟಿ), ಬಜಾಜ್-ಆಟೋ, ಮಹೀಂದ್ರಾ ಆಂಡ್ ಮಹೀಂದ್ರಾ (ಎಂ&ಎಂ), ಎಚ್‌ಯುಎಲ್, ಟಿಸಿಎಸ್, ನೆಸ್ಲೆ ಇಂಡಿಯಾ ಷೇರು ಸೂಚ್ಯಂಕದಲ್ಲಿ ಅತಿಹೆಚ್ಚು ಏರಿಕೆ ಕಂಡಿರುವ ಕಂಪನಿಗಳಾಗಿವೆ. ಅದೇ ರೀತಿ ಟೈಟಾನ್ ಕಂಪನಿಯು ಸೆನ್ಸೆಕ್ಸ್ ಮಾರುಕಟ್ಟೆಯಲ್ಲಿ ಶೇ.2ಕ್ಕಿಂತ ಕಡಿಮೆಯಾಗಿದ್ದು, ಅತಿಹೆಚ್ಚು ಇಳಿಕೆಯಾದ ಷೇರು ಕಂಪನಿ ಎನಿಸಿದೆ. ಇದರ ಜೊತೆಗೆ ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಟಿಸಿ, ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಎಚ್‌ಡಿಎಫ್‌ಸಿ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಕೋಟಕ್ ಮಹೀಂದ್ರಾ ಬ್ಯಾಂಕ್ ಕಂಪನಿಯ ಷೇರುಗಳ ಮೌಲ್ಯದಲ್ಲಿ ಕುಸಿತ ಕಂಡು ಬಂದಿದೆ.

ನಿಫ್ಟಿಯಲ್ಲಿ ಟಾಪ್-5 ಏರಿಳಿತ ಕಂಡ ಷೇರುಗಳು

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಮಾರುಕಟ್ಟೆಯು ಆರಂಭಿಕ ಇಳಿಕೆಯೊಂದಿಗೆ ಗುರುವಾರದ ವಹಿವಾಟು ಆರಂಭಿಸಿತು. ಇಂಡಸ್‌ಇಂಡ್ ಬ್ಯಾಂಕ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಎಲ್ & ಟಿ, ಬಜಾಜ್ ಆಟೋ ಮತ್ತು ನೆಸ್ಲೆ ಕಂಪನಿಗಳು ಅತಿಹೆಚ್ಚು ಏರಿಕೆ ಕಂಡ ಕಂಪನಿಗಳಾಗಿವೆ. ಅದೇ ರೀತಿ ಹಿಂಡಾಲ್ಕೊ, ಟೈಟಾನ್ ಕಂಪನಿ, ಒಎನ್‌ಜಿಸಿ, ಅದಾನಿ ಪೋರ್ಟ್ಸ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳ ಮೌಲ್ಯದಲ್ಲಿ ಇಳಿಕೆಯಾಗಿದೆ.

ರೂಪಾಯಿ ಮೌಲ್ಯದ ಎದುರು ಡಾಲರ್ ಏರಿಳಿತ

ದೇಶೀಯ ಷೇರುಗಳಲ್ಲಿನ ಏರಿಳಿತದ ನಡುವೆ ಗುರುವಾರ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಬೆಲೆ ಕೊಂಚ ಏರಿಕೆಯಾಗಿದೆ. ಭಾರತೀಯ ರೂಪಾಯಿ ಮೌಲ್ಯವು 74.99 ಬದಲಿಗೆ ಗುರುವಾರ ಪ್ರತಿ ಡಾಲರ್‌ಗೆ 74.88ಕ್ಕೆ ಏರಿಕೆಯಾಗಿದೆ. US ನಿಂದ ಸುಧಾರಿತ ಆರ್ಥಿಕ ಮಾಹಿತಿ ಮತ್ತು ವಿತ್ತೀಯ ನೀತಿ ಬಿಗಿಗೊಳಿಸುವ ನಿರೀಕ್ಷೆ ನಡುವೆ US ಡಾಲರ್ ಎದುರು ರೂಪಾಯಿ ಮೌಲ್ಯವು ಶೇ. 0.18ರಷ್ಟು ಹೆಚ್ಚಾಗಿದೆ.

English summary

Indices Extends Gains: Sensex Start up ​with 180 Points Down, Nifty Around 18140

Sensex is 180 points or 0.3 percent Downed at 60955, and the Nifty starts trade at 18140: Here Look For Oct 28th Stock Market Picture.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X